ಉಡುಪಿ ಸೋದೆ ಮಠದ "ತತ್ವ ಮಲ್ಲಿಕಾ"
ಉಡುಪಿಯ ದ್ವೈತ ಮತದ / ವೇದಾಂತದ ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನದ ಶ್ರೀ ವಿಷ್ಣುತೀರ್ಥಾಚಾರ್ಯ ಪರಂಪರೆಯ ಶ್ರೀ ಸೋದೆ ವಾದಿರಾಜ ಮಠದ ಶ್ರೀ ಭಾವಿ ಸಮೀರ ತತ್ವ ಪ್ರಸಾರಣ ಪ್ರತಿಷ್ಠಾನವು ಕಳೆದ ೧೬ ವರ್ಷಗಳಿಂದ ಪ್ರಕಾಶಿಸುತ್ತಿರುವ ತ್ರೈಮಾಸಿಕ ಪತ್ರಿಕೆಯಾಗಿದೆ "ತತ್ವ ಮಲ್ಲಿಕಾ".
ಉಡುಪಿ ರಥಬೀದಿಯಲ್ಲಿರುವ ಶ್ರೀ ಮಠದಲ್ಲಿ ಪತ್ರಿಕಾ ಕಾರ್ಯಾಲಯವಿದೆ. ೪೪ ಪುಟಗಳೊಂದಿಗೆ ಪುಸ್ತಕ ರೂಪದಲ್ಲಿ ಪ್ರಕಟವಾಗುತ್ತಿರುವ "ತತ್ವ ಮಲ್ಲಿಕಾ" ಪತ್ರಿಕೆಯ ಬಿಡಿ ಸಂಚಿಕೆಯ ಬೆಲೆ ೧೫ ರೂಪಾಯಿಗಳು. ಪಂಚ ವಾರ್ಷಿಕ ಚಂದಾ ಮೊತ್ತ ೨೫೦ ರೂಪಾಯಿ, ಪೋಷಕತ್ವದ ಮೊತ್ತ ಒಂದು ಸಾವಿರ ರೂ. ಮತ್ತು ಮಹಾಪೋಷಕತ್ವ ಮೊತ್ತ ಐದು ಸಾವಿರ ರೂಪಾಯಿಗಳಾಗಿವೆ.
ಸೋದೆ ಮಠದ ಹಿಂದಿನ ಮಠಾಧಿಪತಿಗಳಾದ ಶ್ರೀ ವಿಶ್ವೋತ್ತಮ ತೀರ್ಥರು ಪತ್ರಿಕೆಯ ಪ್ರೇರಕರು ಹಾಗೂ ಶ್ರೀ ವಿದ್ಯಾಸಾಗರ ತೀರ್ಥರು ಮಾರ್ಗದರ್ಶಕರು. ಶ್ರೀ ವಿಶ್ವವಲ್ಲಭ ತೀರ್ಥರು ಸಂಸ್ಥಾಪಕರು. ಉಡುಪಿಯ ಪಿ. ಶ್ರೀನಿವಾಸ ತಂತ್ರಿಗಳು ಪ್ರಧಾನ ಸಂಪಾದಕರು. ಡಾ. ಗುರುರಾಜ ಕೃ. ನಿಪ್ಪಾಣಿ ಸಂಪಾದಕರು. ಗೋವಿಂದ ರಾವ್ ವಿ. ನವಲಗುಂದ ಹಾಗೂ ಎ. ರಮೇಶ್ ಹತ್ವಾರ್ ವ್ಯವಸ್ಥಾಪಕರು. ವಿ | ಆತ್ಮಕೂರು ಆನಂದ ತೀರ್ಥಾಚಾರ್ಯ, ವಿ | ರಮೇಶ್ ಆಚಾರ್ಯ, ಬೆ. ನಾ. ವಿಜಯೀಂದ್ರ ಆಚಾರ್ಯ, ವಿ | ರಾಘವೇಂದ್ರ ಪುರಾಣಿಕ ಹಾಗೂ ಉತ್ತನೂರು ಶ್ರೀನಿಧಿ ಆಚಾರ್ಯ ಇವರು ಸಲಹಾ ಮಂಡಳಿ ಸದಸ್ಯರಾಗಿದ್ದಾರೆ.
ಉಡುಪಿ ಸಹಿತ ರಾಜ್ಯದ ವಿವಿಧೆಡೆಗಳಲ್ಲಿನ ಮಾಧ್ವ ಮತದ ವಿದ್ವಾಂಸರು, ಪಂಡಿತರು, ಲೇಖಕರು ತತ್ವ ಮಲ್ಲಿಕಾಕ್ಕೆ ಬರೆಯುತ್ತಾರೆ. ಸಂಪಾದಕೀಯ, ಶ್ರೀ ವಿಶ್ವೋತ್ತಮ ಉವಾಚ, ಶ್ರೀ ವಿಶ್ವವಲ್ಲಭ ಸಂದೇಶ, ಭಾಗವತಭಾವ, ಮುಖಪುಟ ಲೇಖನ, ಗುಂಡಕ್ರಿಯೆ, ಪಾಷಂಡಮತಖಂಡನ, ಭಾವಿಸಮೀರ ಶ್ರೀವಾದಿರಾಜ ವಿರಚಿತ ಸ್ವಪ್ನಪದ, ವಿಶೇಷ ದಿನಗಳು ಪತ್ರಿಕೆಯಲ್ಲಿನ ಖಾಯಂ ಅಂಕಣಗಳಾಗಿವೆ. "ತತ್ವ ಮಲ್ಲಿಕಾ" ತ್ರೈಮಾಸಿಕವು ಚಂದಾದಾರರಿಗೆ ಅಂಚೆ ಮೂಲಕ ವಿತರಣೆಯಾಗುತ್ತದೆ. ಮಾರುಕಟ್ಟೆಯಲ್ಲಿ ಲಭ್ಯ ಇರುವುದಿಲ್ಲ.
~ ಶ್ರೀರಾಮ ದಿವಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!