ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ "ಶಿಕ್ಷಣ ಶಿಲ್ಪಿ"

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯು ಕಳೆದ ಹದಿಮೂರು ವರ್ಷಗಳಿಂದ ನಿರಂತರವಾಗಿ ಪ್ರಕಟಿಸಿಕೊಂಡು ಬರುತ್ತಿರುವ ಮಾಸಪತ್ರಿಕೆಯಾಗಿದೆ "ಶಿಕ್ಷಣ ಶಿಲ್ಪಿ". ಬೆಂಗಳೂರು ಮಂಜುನಾಥನಗರ ೨ನೇ ಘಟ್ಟ ೧ನೇ ಹಂತ ೩ನೇ ಸಿ ಮುಖ್ಯರಸ್ತೆಯ ಕಟ್ಟಡವೊಂದರಲ್ಲಿ ಪತ್ರಿಕಾಲಯವಿದೆ. ೩೬ ಪುಟಗಳ ಪತ್ರಿಕೆಯ ಬಿಡಿ ಸಂಚಿಕೆಯ ಬೆಲೆ ೨೦ ರೂಪಾಯಿ. ವಾರ್ಷಿಕ ಚಂದಾ ೨೫೦ ರೂಪಾಯಿ.

ಇ. ನಂಜಪ್ಪ ಸಂಪಾದಕರು. ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಕಾರ್ಯದರ್ಶಿ ಇ. ಬಸವರಾಜು ಪ್ರಕಾಶಕರು, ಮುದ್ರಕರು ಮತ್ತು ಮಾಲಕರು. ಗೋಕುಲ್ ಶ್ರೀ ಪ್ರಿಂಟರ್ಸ್ ನಲ್ಲಿ ಪತ್ರಿಕೆ ಮುದ್ರಣವಾಗುತ್ತದೆ. ಡಾ. ಸಿ. ಆರ್. ಚಂದ್ರಶೇಖರ್, ಡಾ. ಹೆಚ್. ಎಸ್. ಗಣೇಶ ಭಟ್ಟ, ಪ್ರೊ. ಅಲ್ಲಮಪ್ರಭು ಬೆಟ್ಟದೂರು, ಡಾ. ಆರ್. ಎಸ್. ರಾಜಾನಾಯಕ್, ಡಾ. ವೆಂಕಟಯ್ಯ ಅಪ್ಪಗೆರೆ, ಡಾ. ಹೆಚ್. ಕೆ. ಎಸ್. ಸ್ವಾಮಿ, ಡಾ. ಎಂ. ಎಸ್. ಪ್ರಭುದೇವ್, ಹೆ. ವಿ. ಮುರಳೀಧರ್, ಎನ್. ಪ್ರಭಾ, ಜಿ. ಎಸ್. ಕಾಂಬ್ಳೆ, ಡಿ. ಎಂ. ಮಂಜುನಾಥಸ್ವಾಮಿ, ಕೆ. ಬಿ. ಮಹಾದೇವಪ್ಪ, ಜಿ. ಶ್ರೀನಿವಾಸ, ಡಾ. ಜಿ. ಎಸ್. ಜಯದೇವ್, ಆರ್. ವೆಂಕಟರಾಮು, ಶ್ರೀಮತಿ ರಮಾದೇವಿ, ಸಿದ್ದಣ್ಣ ಜಿ. ಬಾಡಗಿ, ದಾನಿಬಾಬುರಾವ್, ಇಸ್ಮಾಯಿಲ್ ಯಲಿಗಾರ್, ಎಚ್. ಚಂದ್ರಪ್ಪ, ಆನಂದಪ್ಪ, ಅನಂತರಾಮ ಹೇರಳ, ಕೆ. ಎಚ್. ಗಿರೀಶ್, ಡಾ. ಪ್ರಕಾಶ್ ಸಿ. ರಾವ್, ಶುವರಾಜ ಕಪಲಾಪುರೆ, ಟಿ. ಆರ್. ಸ್ವಾಮಿ, ಮುಗಳಿಕಟ್ಟೆ ಲೋಕೇಶ್, ಕೆ. ಸಿ. ಶಂಕರ್ ಹಾಗೂ ಬೆಳ್ಳಶೆಟ್ಟಿ ಸಲಹಾ ಮಂಡಳಿ ಸದಸ್ಯರು.

ವಿಜ್ಞಾನ - ವಿಜ್ಞಾನಿ, ಸಾಹಿತ್ಯ - ಸಾಹಿತಿ, ವೈಚಾರಿಕತೆ, ಪರಿಸರ ಇತ್ಯಾದಿ ವೈವಿಧ್ಯಮಯ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು, ದೇಶ - ವಿದೇಶಗಳಿಗೆ ಸಂಬಂಧಪಟ್ಟ ಮಾಹಿತಿಗಳು, ನಾಡು ನುಡಿಗೆ ಸಂಬಂಧಪಟ್ಟ ಉಪಯುಕ್ತ ಬರಹಗಳು, ರಸಪ್ರಶ್ನೆಗಳು, ಸಾಮಾನ್ಯ ಜ್ಞಾನ ಸಹಿತ ಸಮಸ್ತ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಅಗತ್ಯವಾಗಿ ಬೇಕಾದ ವಿವಿಧ ರೀತಿಯ ಬರಹಗಳು ಮೊದಲ ಆದ್ಯತೆಯಲ್ಲಿ "ಶಿಕ್ಷಣ ಶಿಲ್ಪಿ" ಮಾಸಪತ್ರಿಕೆಯಲ್ಲಿ ಪ್ರಕಟವಾಗುತ್ತವೆ.

~ ಶ್ರೀರಾಮ ದಿವಾಣ