ಪತ್ರಕರ್ತ ಇಕ್ಬಾಲ್ ಕುತ್ತಾರ್ ಅವರ "ಜನಧ್ವನಿ"
"ಸ್ಪೆಷಲ್ ನ್ಯೂಸ್" (ಕನ್ನಡ ಪಾಕ್ಷಿಕ) ಮತ್ತು "ದಿ ಕೋಸ್ಟಲ್ ಟೈಮ್ಸ್" (ಇಂಗ್ಲೀಷ್ ಮಾಸಪತ್ರಿಕೆ) ಎಂಬೆರಡು ಪತ್ರಿಕೆಗಳನ್ನು ಕೆಲ ವರ್ಷಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಸಿದ ಹಾಗೂ ಕಳೆದ ೨೨ ವರ್ಷಗಳಿಂದ "ಎನ್ ಕೌಂಟರ್" ಪತ್ರಿಕೆಯನ್ನು ನಡೆಸಿಕೊಂಡು ಬರುತ್ತಿರುವ ಪತ್ರಕರ್ತ ಇಕ್ಬಾಲ್ ಕುತ್ತಾರ್ ಅವರು ಮಂಗಳೂರಿನಲ್ಲಿ ಎರಡು ವರ್ಷ ಕಾಲ ಪ್ರಕಟಿಸಿದ ಮಾಸ ಪತ್ರಿಕೆಯಾಗಿದೆ "ಜನಧ್ವನಿ".
೨೦೧೧ರಲ್ಲಿ ಆರಂಭಗೊಂಡ ಜನಧ್ವನಿ, ೨೦೧೨ರಲ್ಲಿ ಸ್ಥಗಿತಗೊಂಡಿತು. ಸಂಪಾದಕರು, ಪ್ರಕಾಶಕರು, ಮುದ್ರಕರು ಮತ್ತು ಮಾಲೀಕರು ಇಕ್ಬಾಲ್ ಕುತ್ತಾರ್ ಅವರೇ ಆಗಿದ್ದರು. ಎಂಟು ಪುಟಗಳ ಜನಧ್ವನಿಯ ಬಿಡಿ ಸಂಚಿಕೆಯ ಬೆಲೆ ಏಳು ರೂಪಾಯಿಗಳಾಗಿತ್ತು.
ರಾಜಕೀಯ, ಸಾಮಾಜಿಕ, ಅಪರಾಧ ಸಂಬಂಧಿ ಲೇಖನಗಳು, ವಿಶ್ಲೇಷಣೆಗಳು, ನಾಗರಿಕ ಸಮಸ್ಯೆಗಳ ಮೇಲಿನ ಬರೆಹಗಳು ಇತ್ಯಾದಿ ವೈವಿಧ್ಯಮಯ ಬರೆಹಗಳು ಪತ್ರಿಕೆಯಲ್ಲಿ ಮೂಡಿಬರುತ್ತಿದ್ದುವು.
~ ಶ್ರೀರಾಮ ದಿವಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!