ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ "ನಿರಂತರ ಪ್ರಗತಿ"
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಸಂಸ್ಥೆಯು ಧರ್ಮಸ್ಥಳದಿಂದ ಕಳೆದ ೨೧ ವರ್ಷಗಳಿಂದ (೨೦೦೩ರಲ್ಲಿ ಆರಂಭ) ಪ್ರಕಟಿಸಿಕೊಂಡುಬರುತ್ತಿರುವ ಮಾಸಪತ್ರಿಕೆಯಾಗಿದೆ "ನಿರಂತರ ಪ್ರಗತಿ". ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರು ಗೌರವ ಸಂಪಾದಕರು. ಅನಿಲ್ ಕುಮಾರ್ ಎಸ್. ಎಸ್. ಪ್ರಧಾನ ಸಂಪಾದಕರು. ಡಾ. ಚಂದ್ರಹಾಸ್ ಚಾರ್ಮಾಡಿ ಸಂಪಾದಕರು. ಚೇತನಾ ಚಾರ್ಮಾಡಿ ವರದಿಗಾರರು.
ಡಾ. ಎಲ್. ಎಚ್. ಮಂಜುನಾಥ್ ಪ್ರಕಾಶಕರಾಗಿರುವ " ನಿರಂತರ ಪ್ರಗತಿ"ಯು ಉಜಿರೆಯ ಮಂಜುಶ್ರೀ ಪ್ರಿಂಟರ್ಸ್ ನಲ್ಲಿ ಮುದ್ರಣವಾಗುತ್ತಿದೆ. ಶೇಖರ್ ಟಿ. ಮುದ್ರಕರು. ಪುಸ್ತಕ ರೂಪದಲ್ಲಿ ೪೪ ಪುಟಗಳಲ್ಲಿ ಹೊರಬರುತ್ತಿರುವ ಪತ್ರಿಕೆಯ ಬಿಡಿ ಸಂಚಿಕೆಯ ಬೆಲೆ ೧೫ ರೂಪಾಯಿ. ವಾರ್ಷಿಕ ಚಂದಾ ಮೊತ್ತ ೧೭೦ ರೂಪಾಯಿಗಳು.
ಸಂಪಾದಕೀಯ (ಅನಿಲ್ ಕುಮಾರ್, ಶ್ರೀಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರು), ಅಧ್ಯಕ್ಷರ ನಲ್ನುಡಿ (ಡಿ. ವೀರೇಂದ್ರ ಹೆಗ್ಗಡೆ), ಟೆಕ್ನಾಲಜಿ, ಕೃಷಿಮಿತ್ರ, ಸರಕಾರಿ ಸವಲತ್ತು, ಆರೋಗ್ಯ, ಕುಟುಂಬ ವಿಭಾಗ, ಪ್ರಚಲಿತ (ದೇಶ / ವಿದೇಶ / ರಾಜಕೀಯ), ವಾತ್ಸಲ್ಯದ ಕಥೆಗಳು, ವಿಜ್ಞಾನ, ಪರಿವರ್ತನೆ, ಕಥೆ, ಸ್ಪೋರ್ಟ್ಸ್, ಜ್ಞಾನ ವಿಕಾಸ, ಪುನರ್ಜನ್ಮ (ಸಾಧಕರ ಸಾಧನೆಯ ಪರಿಚಯ), ಸ್ಪೆಷಲ್ ಸ್ಟೋರಿ, ಪದಬಂಧ, ಸೈಕಾಲಜಿ, ಫೋಟೋ ಕ್ಯಾಪ್ಶನ್, ಥಿಂಕ್, ಆಸರೆ, ಪ್ರಸ್ತುತ, ಕವರ್ ಸ್ಟೋರಿ (ಮುಖಪುಟ ಲೇಖನ), ಶಿಕ್ಷಣ (ಮಾಹಿತಿ), ಸ್ಪೂರ್ತಿ, ಕಳಕಳಿ, ಫೀಡ್ ಬ್ಯಾಕ್ (ಓದುಗರ ಪತ್ರಗಳು), ಇನ್ ಬಾಕ್ಸ್, ಜಾಗೃತಿ, ಯಂತ್ರ - ತಂತ್ರ, ಕಾನೂನು, ಸಾಹಿತ್ಯ, ಬ್ಯಾಂಕ್ ಮ್ಯಾನೇಜರ್ ನ ನೋವು ಮತ್ತು ಗೆಳತಿ (ಜ್ಞಾನ ವಿಕಾಸ ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರ ಲೇಖನ) ಎಂದು ಒಟ್ಟು ೩೪ ಖಾಯಂ ಕಾಲಂಗಳಡಿಯಲ್ಲಿ ವೈವಿಧ್ಯಮಯ ಬರೆಹಗಳು ನಿರಂತರ ಪ್ರಗತಿಯಲ್ಲಿ ಪ್ರಕಟವಾಗುತ್ತವೆ. ವಿವಿಧ ಬರಹಗಾರರು ಬರೆಯುತ್ತಾರೆ.
ರಾಜ್ಯಾದ್ಯಂತ ನಡೆಯುವ ಯೋಜನೆಯ ವಿವಿಧ ಕಾರ್ಯಕ್ರಮಗಳ ವರದಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳ ವರದಿಗಳಲ್ಲದೆ ಇನ್ನಿತರ ಬರೆಹಗಳೂ ಪತ್ರಿಕೆಯಲ್ಲಿವೆ.
-ಶ್ರೀರಾಮ ದಿವಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!