ಯಾಕೆ ಇನ್ನು ಯಾರು ಹೆಸರು ಕೊಟ್ಟಿಲ್ಲ ನಾವು ಹೊಸ ಆಟ ಒಂದನ್ನು ಶುರು ಮಾಡಿದ್ದೇವೆ. ಇದೊಂದು ಊರು ಆ ಊರಿನಲ್ಲಿ ನಿಮ್ಮನ್ನು ಬಿಟ್ಟು ಬೇರೆ ಯಾರು ಇಲ್ಲ. ಇಲ್ಲಿ ಆಯ್ದ 20 ಜನರಿಗೆ ಮಾತ್ರ ಅವಕಾಶ. ಇಲ್ಲಿ ನೀವು ಬದುಕು ಕಟ್ಟಿಕೊಳ್ಳಬೇಕು, ಮುಂಜಾನೆ ಸೂರ್ಯ ಹುಟ್ಟುವುದಕ್ಕಿಂತ ಮೊದಲು ಎದ್ದು ದಿನಚರಿಗಳನ್ನ ಮುಗಿಸಿ ನಿಮಗೆ ಬೇಕಾಗಿರುವ ತಿಂಡಿಗಳನ್ನು ನೀವೇ ತಯಾರು ಮಾಡಿಕೊಳ್ಳಬೇಕು. ನಿಮ್ಮ ಬದುಕಿಗೆ ಅಗತ್ಯವಾದದ್ದನ್ನ ನೀವೇ ಬೆಳೆಯಬೇಕು ಹಾಲು ಮೊಸರು ಬೇಕು ಅಂತಿದ್ರೆ ನೀವೇ ಕೆಲಸ ಮಾಡಬೇಕು. ಇಲ್ಲಿ ಪ್ರತಿ ಕ್ಷಣ ಬದುಕುತ್ತಿರಬೇಕು ಮಾತುಕತೆ ಹಾಸ್ಯ ಹರಟೆ, ಜಗಳ ಎಲ್ಲವೂ ಇದೆ ಆದರೆ ಅದು ಬದುಕಿಗೆ ಪೂರಕವಾಗಿ .ಯಾರನ್ನು ಮೇಲೆತ್ತುವ ಹಾಗಿಲ್ಲ ಯಾರನ್ನು ಕೆಳಗೆ ಹಾಕುವ ಹಾಗೆಯೂ ಇಲ್ಲ. ಎಲ್ಲರೂ ಸೇರಿ ಜೊತೆಯಾಗಿ ಬದುಕು ಕಟ್ಟಿಕೊಳ್ಳುವುದು ಹೇಗೆ ಅನ್ನೋದನ್ನ ಅರ್ಥ ಮಾಡಿಕೊಳ್ಳಬೇಕು .ಮನೋರಂಜನೆಯು ಸಿಗುತ್ತದೆ ಬದುಕಿನ ಪಾಠವು ಸಿಗುತ್ತದೆ. ಎಲ್ಲಾ ಷರತ್ತುಗಳಿಗೆ ಒಪ್ಪಿದರೆ ಈ ಆಟದೊಳಗೆ ಪ್ರವೇಶಿಸಬಹುದು. ಇಲ್ಲಿ ಗೆದ್ದವರಿಗೆ ನಾವು ಬಹುಮಾನ ನೀಡುವುದಿಲ್ಲ ಆದರೆ ಅವರು ಬದುಕಿನಲ್ಲಿ ಗೆಲ್ಲುತ್ತಾರೆ ಎನ್ನುವ ಭರವಸೆಯನ್ನು ನೀಡುತ್ತೇವೆ. ಪ್ರತಿಯೊಂದು ಕೂಡ ಯಥೇಚ್ಛವಾಗಿ ಇಲ್ಲಿ ಸಿಗುವುದೇ ಇಲ್ಲ. ದುಡಿಮೆಗೆ ತಕ್ಕ ಪ್ರತಿಫಲ ಇಲ್ಲಿ ಖಂಡಿತವಾಗಿ ಸಿಗುತ್ತದೆ. ನಿಮ್ಮಲ್ಲಿ ಯಾರಿಗಾದರೂ ಆಸಕ್ತಿ ಇದ್ರೆ ಬನ್ನಿ ನಾವು ಹೊಸತೊಂದು ಬಿಗ್ ಬಾಸ್ ಆರಂಭಿಸುತ್ತಿದ್ದೇವೆ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ