ನಡಿಗೆಯಲ್ಲಿ ಭಯವಿಲ್ಲ, ಅಭ್ಯಾಸವಾಗಿಬಿಟ್ಟಿದೆ, ದಿನವೂ ಅದೇ ಹಗ್ಗದ ಮೇಲೆ ಕೂಲನ್ನು ಹಿಡಿದು ನಡೆಯಲೇಬೇಕು . ಕೆಳಗೆ ಇದ್ದ ಅಲುಮಿನಿಯಂ ತಟ್ಟೆಯ ಒಳಗಡೆ ಹಣ ತುಂಬಲೇಬೇಕು. ಪ್ರತಿದಿನವೂ ಚಿಲ್ಲರೆ ಕಾಸುಗಳಷ್ಟೇ ಬೀಳುತ್ತವೆ. ಮೊದ-ಮೊದಲು ಹಲವು ಸಲ ಬಿದ್ದಿದ್ದೇನೆ. ತುಂಬಾ ನೋವಾಗಿತ್ತು ಮನೆಯವರಿಂದ ಬೈಗುಳವು ಸಿಕ್ಕಿತು ಒಂದಷ್ಟು ದಿನ ಉಪವಾಸವೇ ನಮ್ಮ ಬದುಕಾಗಿತ್ತು ಎಲ್ಲ ರೀತಿಯ ನಡಿಗೆಗಳನ್ನು ಅಭ್ಯಾಸ ಮಾಡಿಕೊಂಡಿದ್ದೇವೆ ಯಾಕೆಂದರೆ ನಾವೆಲ್ಲರೂ ರಾತ್ರಿ ಹೊತ್ತು ನೆಮ್ಮದಿಯಲ್ಲಿ ಊಟ ಮಾಡಬೇಕು ಹಾಗಾಗಿ ಇಂದು ಮುಂದುವರಿಸಿದ್ದೇನೆ. ಹೋರಾಟದ ನಡಿಗೆ ನಿರಂತರವಾಗಿದೆ. ಈ ನಡಿಗೆ ಎಲ್ಲಿ ಮತ್ತೆ ದೊಡ್ಡ ಹೆಜ್ಜೆಗಳನ್ನ ಇಡುವುದಕ್ಕೆ ಅವಕಾಶ ಮಾಡಿಕೊಡುತ್ತೋ ಅನ್ನೋದು ಗೊತ್ತಿಲ್ಲ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ