ಹೊಳೆವ ಕಂಗಳಲ್ಲಿ ಮನವನಿತ್ತೆ ಸಖ
ಬಾಳ ಬೆಸುಗೆಯಲ್ಲಿ ತನುವನಿತ್ತೆ ಸಖ
ಸಪ್ತಪದಿಯ ತುಳಿದು ಹತ್ತಿರವಾದೆನು
ಬಾಹು ಬಂಧನದಲ್ಲೇ ಸುಖವನಿತ್ತೆ ಸಖ
ಸಂಬಂಧಗಳ ನಡುವೆಯೇ ಈಸಬೇಕು
ಜಯಿಸುತಲೇ ನಿನಗೆ ಬದುಕನಿತ್ತೆ ಸಖ
ನಂದಗೋಕುಲದಂತೆ ಸಂಸಾರವಿರಲಿ
ಪ್ರೀತಿಪ್ರೇಮದ ಜೊತೆ ಸವಿಯನಿತ್ತೆ ಸಖ
ಹೊಸದಾದ ಚೈತನ್ಯ ನಮ್ಮಲಿರಲೀ ಈಶ
ಬಾಳಿನಲಿ ನನಸಿರಲು ಮಗುವನಿತ್ತೆ ಸಖ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!