ಬಯಕೆಗಳು, ಸಿರಿಯಾಗಿ ಇರಲಿ
ಗಂಡ ಹೆಂಡತಿ,ಜೊತೆಯಾಗಿ ಇರಲಿ
ಮಾತಿನ ಮಧ್ಯೆ, ಪ್ರೀತಿ ಇಲ್ಲವೇಕೆ
ಸಂಬಂಧಗಳು,ಸರಿಯಾಗಿ ಇರಲಿ
ತಂದೆ ತಾಯಿಯನ್ನು,ನೋಯಿಸದಿರಿ
ಮನೆಯೆಂದೂ, ಗುಡಿಯಾಗಿ ಇರಲಿ
ಮೌನದ ನಡುವೆ, ಬೆಸುಗೆ ಚೆಂದವು
ಎಂದೂ ಮುತ್ತೇ, ಸವಿಯಾಗಿ ಇರಲಿ
ಸಂತೋಷ ಸಂಭ್ರಮ, ಬದುಕು ಈಶ
ಹಿತವಾಗಿ ಮನ ಖುಷಿಯಾಗಿ ಇರಲಿ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!