ರಮೇಶನಿಗೆ ಬದುಕು ಅರ್ಥವಾಗುತ್ತಲೇ ಇಲ್ಲ. ರಜನಿ‌ ಮತ್ತೆ ಮತ್ತೆ ಹೇಳುತ್ತಿದ್ದಾಳೆ, ನಿನ್ನ ನಂಬಿ ಬಂದಿದ್ದೇನೆ, ನನಗೂ ಕನಸುಗಳಿವೆ ನಿನ್ನ ವೈಯಕ್ತಿಕ ಬದುಕಿನ‌ ಬಗ್ಗೆ ನನಗೆ ಪ್ರಶ್ನೆಗಳಿಲ್ಲ ಆದರೆ ನಿನ್ನ ಬದುಕಿನ ಭಾಗವಾಗಿರುವ ನನ್ನನ್ನ ಮರೆತು ಬಿಡಬೇಡ. ಸಮಯವು ಓಡಿ ಬಿಡುತ್ತದೆ, ನಿನ್ನೊಂದಿಗೆ ಕಳೆಯ ಬೇಕಾದ ಅಮೂಲ್ಯ ಕ್ಷಣವನ್ನ ಕಳೆದುಕೊಂಡು ಬಿಟ್ರೆ ಮತ್ತದೆಂದೂ ಸಿಗುವುದೇ ಇಲ್ಲ. ಅರ್ಥ ಮಾಡಿಕೋ ನಿನ್ನಲ್ಲಿ‌ ಬೇಡಿಕೆಗಳನ್ನ ಸಲ್ಲಿಸುತ್ತಲೇ ಇದ್ದೇನೆ. ಬದಲಾವಣೆ ಕಾಣುತ್ತಿಲ್ಲ. ಕಳೆದುಕೊಂಡ ಮೇಲೆ ಚಿಂತಿಸಿ ಫಲವಿಲ್ಲ. ರಮೇಶ ಕೇಳುತ್ತಾನೆ, ಹೌದೆಂದು ಒಪ್ಪಿಕೊಳ್ಳುತ್ತಾನೆ, ಮತ್ತದೇ ನಾಯಿ ಬಾಲದಂತಾಗುತ್ತಾನೆ. ವಿಧಿ ಛಾಟಿ ಹಿಡಿದು ನಿಂತಿದ್ದಾನೆ, ಬದಲಾಗದಿದ್ದಾರೆ ಬಾಳು ನರಕವಾದೀತು.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ