ಯಾವುದೋ ಕಟ್ಟಡದ ಕೋಣೆಯೊಳಗೆ ಪುಟ್ಟ ಡಬ್ಬಿಯೊಳಗೆ ಬಂದಿಯಾಗಿದ್ದ ಸಿಸಿಟಿವಿಯೊಂದು ತನ್ನ ಗೆಳೆಯರ ಜೊತೆಗೂಡಿ ನಾಲ್ಕು ರಸ್ತೆ ಸೇರುವಲ್ಲಿ ಬಂದು ನೇತು ಬಿಳಲಾರಂಬಿಸಿತು .ಅದಕ್ಕೆ ಹೆಚ್ಚಿನ ಕೆಲಸವೇನು ಇಲ್ಲ ತನ್ನ ಕಣ್ಣ ಮುಂದೆ ಕಾಣುವುದನ್ನು ಹಾಗೆಯೇ ಮುಂದೆ ದಾಟಿಸಿ ಬಿಡುವುದು. ಇದೇ ಕೆಲಸವನ್ನ ಮಾಡ್ತಾನೆ ಇತ್ತು. ಹಲವು ಜನ ಬದುಕು ಬದಲಿಸಿಕೊಂಡರು, ತಪ್ಪು ದಾರಿಯಲ್ಲಿ ಹೋಗ್ತಾ ಇದ್ದವರು ಸರಿದಾರಿಯ ಕಡೆಗೆ ತಿರುಗಿಬಿಟ್ಟರು. ಸರಕಾರಕ್ಕೆ ಅವರ ದಂಡದಿಂದ ಒಂದಷ್ಟು ಹಣ ಸಂಪಾದನೆ ಆಗ್ತಾ ಇತ್ತು. ಆದರೆ ಅದೇ ರಸ್ತೆಯ ತುಂಬೆಲ್ಲಾ ಬಿದ್ದಿರುವ ಹೊಂಡಗಳಿಂದ ಗಾಯ ಮಾಡಿಕೊಂಡವರು ಅಪಘಾತಕ್ಕೀಡಾದವರು, ಪ್ರಾಣ ಕಳೆದುಕೊಂಡವರನ್ನು ನೋಡ್ತಾನೆ ಇತ್ತು. ಅಲ್ಲಲ್ಲಿ ಬಿದ್ದಿರುವ ಕಸದ ರಾಶಿಗಳನ್ನ ಕಂಡು ಕಣ್ಣು ಮುಚ್ಚಿಕೊಳ್ಳದಾಗದ್ದಕ್ಕೆ ನೋವು ಪಡ್ತಾ ಇತ್ತು. ಆದರೆ ಏನೋ ಬದಲಾವಣೆಗಳಾಗದನ್ನು ಕಂಡು ಅದಕ್ಕೆ ಬೇಸರವಾಗುತ್ತಿತ್ತು. ಬದಲಾವಣೆಯಾಗಲಿ ಎನ್ನುವ ಆಸೆ ಅದರದ್ದು. ಆದರೆ ಅದನ್ನ ನಿಯಂತ್ರಿಸುವವ ತನಗೆ ಅಗತ್ಯವಿದ್ದದ್ದನ್ನು ಮಾತ್ರ ನೋಡಿ ಉಳಿದದ್ದನ್ನು ಕಡೆಗಣಿಸಿಬಿಡುತ್ತಾನೆ. ಮತ್ತೆ ಮತ್ತೆ ಕಾಯುತ್ತಿದೆ ತನ್ನಿಂದ ಬದಲಾವಣೆ ಆಗೂದಾದರೂ ಹೇಗೆ ಅಂತ ಯೋಚನೆ ಮಾಡುತ್ತಿದೆ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!