ಹತ್ತಿಯಾಂಗೆ ನೀನು ಹೇಳಿ ಕೇಳಿದ್ದೆ ಅಪ್ಪ ಕೂಸೆ

ಮೃದುವಾದ ಹಾಸಿಗೆಯಾಂಗೆ ನೀನು ವಪ್ಪ ಕೂಸೆ

 

ನಾಚಿಕೆಯ ಮುದ್ದೆಯೇ ಎನ್ನ ಹತ್ತರೆ ಬಪ್ಪಾಗ ಎಂತಗೆ

ಸೊಂಟವ ತಿರಿಗಿಸ್ಯೊಂಡು ಬಂದರೆ ಆನು ಬೆಪ್ಪ ಕೂಸೆ

 

ಜೋರು ಮಾಡ್ವಾಗ ನೋಡೆಕ್ಕು ಮೋರೆಯ ಚೆಂದವ

ಕೋಪಲ್ಲಿ ದುರುಗುಟ್ಟುವ ಕಣ್ಣಿಲಿ ನೀನು ತುಪ್ಪ ಕೂಸೆ 

 

ಮೈಮಟ್ಟಿದರೆ ಸಾಕು ಶರೀರ ಜ್ವರ ಬಂದವರಾಂಗಿರ್ತು 

ಅಸಲಿಂಗೆ ಆರಾರ ಮನಸ್ಸಿನ ವಳವೆಲ್ಲ  ಕಪ್ಪ ಕೂಸೆ 

 

ಎಂಗಳ ಮಾಣಿ ಈಶನ ಹಾಂಗಿಪ್ಪವು ಸಿಕ್ಕವು ನಿನಗೆ

ಬಾಳಿಲಿ ಹೀಂಗೆ ಬಪ್ಪಾಂಗೆ ಅನುಭವಿಸೆಕ್ಕು ತಪ್ಪ ಕೂಸೆ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ