ಮೋಹ ನುಸುಳಿದೆ, ಅವನ ಮೋಡಿಗೆ
ಮಧುವು ತುಂಬಿತು ನನ್ನೊಳು
ಹೀರಿ ಒಲುಮೆಯ, ಪಡೆವ ಸಖನು
ಬಾರದಿರುವನೆ ಒಮ್ಮೆಯು
ಚೆಲುವೆ ಮೋಹಿನಿ, ಬಿಂಕದರಸಿಯು
ಎನುತ ಹೇಳ್ವರು ನನ್ನನು
ಪ್ರೀಯ ವಲ್ಲಭ, ಸನಿಹ ಇದ್ದರೆ
ಬಾಚಿ ತಬ್ಬುವ ಚೆಲುವನು
ರತ್ನ ಸಿರಿಯಂತಿರುವ,ದೇಹವು
ಕನಸು ಕಂಡಿದೆ ನಿತ್ಯವು
ನನಸಿನಲ್ಲಿಯೆ, ಇನಿಯ ಬಾರನೆ
ಎನುತ ಕಾದಿದೆ ತನುವದು
ತಂಪಿನೊಲವಿಗೆ,ಸವಿಯು ಬಂದಿದೆ
ತಂಪ ಕೊಡುವನು ಎಲ್ಲಿಹ
ಮನವು ಮೌನದಿ, ವಿರಹಲೋಕದಿ
ಗೆಳೆಯ ದೂರದಿ ನಿಂತಿಹ
-ಹಾ.ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!