ಬಾಳಲ್ಲಿ ನೆಮ್ಮದಿಯು,ಹೋದ ಬಳಿಕವು ನನಗೆ 

ನಮ್ಮವರು ಯಾರೆಂದು,ಯಾರು ಇಹರೆ

ಜೀವನದ ಪಲ್ಲವಿಯು,ಮುಗಿದಾದ ಬಳಿಕವು 

ಹೇಳಿಸಲು ಕೇಳಿಸಲು,ಯಾರು ಇಹರೆ

 

ತಂದೆ ತಾಯಿಯು ಇದ್ದ,ತಾಣದಲಿ ನಾನಂದು

ಸುಖದಲ್ಲಿ ನಗು ನಗುತ,ಬಾಳ್ವೆ ನಡೆಸಿ 

ಇಂದೆನಗೆ ನೋವುಗಳೆ,ಮನೆ ಮಾಡಿ ಕುಳಿತಿರಲು 

ಮನವು ಮರುಗಿದೆ ದಿನವು,ಬೇನೆ ಸಹಿಸಿ 

 

ನೆರೆಯವರ ನುಡಿಗಳಲಿ, ಮೃದು ಮಾತು ಇಲ್ಲದೆ

ಎಲ್ಲೆಲ್ಲು ಕುಹಕವೇ,ಬರಿದೆ ನೋವು 

ಅಂತರಾತ್ಮದ ಘನತೆ,ಕುಗ್ಗುತಲೆ ಸಾಗುತಿರೆ 

ರೋದನೆಯ ನಡುವೆಯೇ, ಕೊನೆಗೆ ಸಾವು

 

-ಹಾ. ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ