ನೀ ಬಾರದೇ ಗೆಳತಿ,ನಾ ಬರುವೆನೇ ಹೇಳು
ನಿನ್ನ ಪ್ರೀತಿಯಾ ಉಸಿರ, ಕಾಣುವೆನೇ ಹೇಳು
ಕನಸಲ್ಲಿ ಕಂಡಿಹ ನೀನೂ, ನನಸಲ್ಲಿ ಎಲ್ಲಿಹೆ
ಶಯನಗ್ರಹದ ಚೆಲುವ,ನೋಡುವೆನೇ ಹೇಳು
ರಾತ್ರಿಯಾಗೆ ಬಾನಿನಲ್ಲಿ, ಚಂದ್ರ ತಾರೆ ಕಾಣಿಪರು
ಮಡಿಲಲ್ಲಿ ತಲೆಯಿಟ್ಟೂ, ಮಲಗುವೆನೇ ಹೇಳು
ತಂಪಿನೊಲವು ಸುತ್ತೆಲ್ಲ, ನೋಡು ಸವಿಯ ಹರಡಿದೆ
ಕಾಲಲಿರುವ ಗೆಜ್ಜೆಯ ನಾದವ, ಕೇಳುವೆನೇ ಹೇಳು
ಮಧುರ ಭಾವ ತುಂಬಿದೆ, ನನ್ನವಳು ಎಲ್ಲಿ ಈಶ
ಒಂಟಿ ದೇಹವು ಕಾತರಿಸಿದೆ, ಸೇರುವೆನೇ ಹೇಳು
-ಹಾ ಮ ಸತೀಶ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!