ಹಂಚಿಕೊಳ್ಳುವ ಒಲುಮೆಯನು ಕಿತ್ತುಕೊಳ್ಳಬೇಡಿ ನಾಯಕರೆ
ದ್ವೇಷ ಹೋಡೆದಾಟ ನಡೆವುದ ಒಪ್ಪಿಕೊಳ್ಳಬೇಡಿ ನಾಯಕರೆ
ಜನಸಾಮಾನ್ಯರಿಂದು ನಿಮ್ಮನ್ನೇ ನಂಬಿಹರು ತಿಳಿಯದಾದಿರೇ
ಸ್ವಾರ್ಥ ವಂಚನೆಗಳ ನೀವೆಂದೂ ತಬ್ಬಿಕೊಳ್ಳಬೇಡಿ ನಾಯಕರೆ
ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ನಿಮಗೆ ವಂಚಿಸದವರು ನಾವುಗಳು
ಕಷ್ಟವಿಲ್ಲದೆಯೇ ಬದುಕಿರುವಾಗ ಬಾಚಿಕೊಳ್ಳಬೇಡಿ ನಾಯಕರೆ
ಈ ನೆಲದಿ ವಾಸಿಸುವ ಜನರ ತಾಳ್ಮೆಗೂ ಒಂದು ಮಿತಿಯಿದೆ ಈಶ
ಜಾತಿ ಜಾತಿಯ ನಡುವೆ ದ್ವೇಷವನ್ನು ಕಟ್ಟಿಕೊಳ್ಳಬೇಡಿ ನಾಯಕರೆ
-ಹಾ.ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!