ಎಲ್ಲವನು ಕಳಕೊಂಡೆನೋ ತನುವು ಅಲೆಯುತಿದೆ ಗೆಳತಿ

ಬಲ್ಲವನು ನಾನೆಂದೆನೋ ಮನವು ತಿವಿಯುತಿದೆ ಗೆಳತಿ

 

ಕಲ್ಲಿನಲಿ ಕೆತ್ತಿದೆನೋ ಜೀವವು ಮುನಿಯುತಿದೆ ಗೆಳತಿ

ಕನಸಿನಲಿ ತುಳಿದೆನೋ ಹಸಿವು ತೊರೆಯುತಿದೆ ಗೆಳತಿ

 

ನೆಮ್ಮದಿಯಲಿ ಇರುವೆನೋ ಹಣವು ಬಬಡಿಯುತಿದೆ ಗೆಳತಿ

ಕನ್ನಡಿಯಲಿ ನೋಡಿದೆನೋ ಅರಿವು ಜರೆಯುತಿದೆ ಗೆಳತಿ

 

ಚಿಂತೆಯಲಿ ಕುಸಿದೆನೋ ಕಸುವು ಮಸೆಯುತಿದೆ ಗೆಳತಿ

ಮರೆಯಲಿ ಮಲಗಿದೆನೋ ಹಠವು ಮೊರೆಯುತಿದೆ ಗೆಳತಿ

 

ಈಶನಲಿ ಸೇರಿದೆನೋ ಧ್ಯಾನವು ಪೊರೆಯುತಿದೆ ಗೆಳತಿ

ನನಸಿನಲಿ ಬಂದಿಹೆನೋ ಗುಣವು ಬೆರೆಯುತಿದೆ ಗೆಳತಿ

 

-ಹಾ ಮ ಸತೀಶ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ