ಅಮ್ಮಾ ನೀನಾದ್ರೂ ಹೇಳು. ನನ್ನನ್ನ ಕರೆದುಕೊಂಡು ಹೋಗೋದು ಬೇಡಾ ಅಂತಾ. ನಿನ್ನ ಮಾತು ಕೇಳ್ತೇನೆ. ಯಾಕೆ ಅಮ್ಮ ನನ್ನ ಮಾತು ನಿನಗೆ ಕೇಳ್ತಾ ಇಲ್ವಾ? ನೀನು ಜೀವವಿಲ್ಲದ ಆ ಶವವನ್ನ ಯಾಕೆ ನೋಡ್ತಾ ಇದ್ದೀಯಾ? ನಾನು ಇಲ್ಲಿದ್ದೇನೆ. ಅಮ್ಮ ನಿನ್ನ ಮಾತು ಕೇಳ್ತೇನೆ, ಯಾವತ್ತೂ ಡ್ರಗ್ಸ್, ಗಾಂಜಾ, ಕುಡಿತ, ಸಿಗರೇಟು ಇದರ ಕಡೆಗೆ ಗಮನ ಹರಿಸೋದಿಲ್ಲ. ನೀನು ಹೇಳಿದ ಎಲ್ಲ ಮಾತನ್ನ ಖಂಡಿತಾ ಕೇಳ್ತೆನೆ. ಈ ಯಮನಿಗೆ ಹೇಳು ನನ್ನನ್ನ ಬಿಟ್ಟು ಹೋಗೋದ್ದಕ್ಕೆ. ನನಗೆ ಬದುಕಿನ ಆಸೆ ಇದೆ ಅಮ್ಮಾ.... ಸತ್ತವನ ಮಾತು ಯಾರ ಕಿವಿಗೂ ಬೀಳಲೇ ಇಲ್ಲ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!