ನೋಡಿ ಸರ್ ಇಲ್ಲಿ ನಮ್ಮೂರ ಬೀದಿಯಲ್ಲಿ ಕಾರಣ ಓಡಾಡ್ತಾ ಇದೆ. ನಾನು ಅದನ್ನು ಮತ್ತೆ ಮತ್ತೆ ಸರಿಯಾಗಿ ಗಮನಿಸಿದ್ದೇನೆ ಹೌದು ಅದು ಕಾರಣವೇ. ಅದು ಯಾವಾಗ ಯಾರ ಮನೆಯನ್ನು ಹೊಕ್ಕುತ್ತೋ ಯಾರ ಮನಸ್ಸಿನೊಳಗೆ ಮನೆ ಮಾಡುತ್ತೋ ಗೊತ್ತಾಗುವುದಿಲ್ಲ. ಒಂದು ಕ್ಷಣದಲ್ಲಿ ಸಾವಿರ ಲಕ್ಷಗಳ ಮನೆಯ ಒಳಗೂ ಮನದ ಒಳಗೂ ಪ್ರವೇಶಿಸುವ ಸಾಮರ್ಥ್ಯ ಅದಕ್ಕೆ ಇದೆ. ಕಾರಣ ಒಂದು ಸಲ ಮನೆಗೆ ಮನಸ್ಸಿನೊಳಗೆ ನುಗ್ಗಿ ಬಿಟ್ಟರೆ ಸಂತೋಷವೂ ನೋವು ದುಃಖವು ಏನನ್ನಾದರೂ ನೀಡಬಹುದು. ಆ ವ್ಯಕ್ತಿಯ ಒಳಗೆ ಉಂಟಾಗಿರುವ ಭಾವನೆಗಳಿಗೆ ಕಾರಣವೇನೆನ್ನುವುದು ಕಾರಣಕ್ಕೆ ಮಾತ್ರ ಗೊತ್ತಿರುತ್ತೇ ವಿನಹ ವ್ಯಕ್ತಿಗೆ ಕೆಲವೊಮ್ಮೆ ಅರಿವಿಗೆ ಬರುವುದಿಲ್ಲ. ಆ ಕಾರಣಕ್ಕೆ ಕೆಲವರು ಸಂತೋಷವಾಗಿ ಇರ್ತಾರೆ ಕೆಲವೊಮ್ಮೆ ಅನಗತ್ಯವಾಗಿ ನೋವನ್ನು ಅನುಭವಿಸುತ್ತಾರೆ ಹಾಗಾಗಿ ಕಾರಣವನ್ನು ನಮ್ಮೊಳಗೆ ಪ್ರವೇಶಿಸುವ ಮೊದಲು ಒಂದಷ್ಟು ವಿಚಾರಿಸಿ ಒಳಗೆ ತೆಗೆದುಕೊಂಡು ಬಿಡಿ ಇಲ್ಲವಾದರೆ ಸುಮ್ಮನೆ ಸಮಯವು ವ್ಯರ್ಥ ಆಯಸ್ಸು ವ್ಯರ್ಥವಾಗುತ್ತದೆ. ಹಾಗಾಗಿ ನಿಮ್ಮೂರಿನ ಬೀದಿಗೂ ಕಾರಣ ತಿರುಗಾಟ ನಡೆಸಬಹುದು ಎಚ್ಚರಿಕೆ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!