ರಾಜ ಘೋಷಣೆ ಹೊರಡಿಸಿದ ಊರಿನ ಮಧ್ಯದಲ್ಲೊಂದು ಆಸ್ಪತ್ರೆ ಕಟ್ಟಿಸಿ, ಅದರ ಪಕ್ಕದಲ್ಲಿ ಒಂದು ಸ್ಮಶಾನ ನಿರ್ಮಿಸಿ, ಅಲ್ಲೇ ಉದ್ಯಾನವನವು ಇರಲಿ. ಜನ ಪ್ರತಿಯೋಂದನ್ನ ನೋಡುತ್ತಾ ಓಡಾಡುತ್ತಿರಬೇಕು. ಆಗಾಗ ಎಲ್ಲವೂ ಕಣ್ಣು ಮುಂದೆ ಕಾಣುತ್ತಿರಬೇಕು. ತಾವು ಸಂಗ್ರಹಿಸಿ ಇಟ್ಟದ್ದು ಕೊನೆಯವರೆಗೂ ಬರುವುದಿಲ್ಲ, ತಮ್ಮ ಅಹಂಕಾರಗಳೆಲ್ಲವೂ ಒಂದಲ್ಲ ಒಂದು ದಿನ ಬೂದಿಯಾಗುತ್ತದೆ, ಭೂಮಿ ಬಿಟ್ಟು ಹೊರಟಾಗ ಏನನ್ನು ಕೊಂಡೊಯ್ಯುವುದಿಲ್ಲ ವ್ಯಕ್ತಿತ್ವಗಳು ಮಾಡಿದ ಒಳ್ಳೆಯ ಕೆಲಸಗಳು ಕೊನೆಯವರೆಗೂ ಉಳಿಯುತ್ತವೆ. ಇದಿಷ್ಟನ್ನ ಅರಿತುಕೊಳ್ಳಬೇಕು ಸಿಕ್ಕಾಗ ಸಂಭ್ರಮ ಪಟ್ಟು ನೋವುಂಟಾದಾಗ ಎಲ್ಲವನ್ನು ಮರೆತು ಮುನ್ನುಗ್ಗುವ ಧೈರ್ಯ ಮನಸೊಳಗೆ ಮೂಡಬೇಕು. ಅನ್ನೋದರ್ಥವಾಗಲು ಎಲ್ಲವನ್ನು ಕಟ್ಟಿಸಿಬಿಟ್ಟ ಎಲ್ಲವೂ ಜನರ ಕಣ್ಣ ಮುಂದೆ ನಡೀತಾ ಇದ್ರು ಕೂಡ ಯಾರು ಬದಲಾಗಲೇ ಇಲ್ಲ .ಯಾರು ಮನಸ್ಸಿಗೆ ತೆಗೆದುಕೊಳ್ಳಲೇ ಇಲ್ಲ .ರಾಜನ ಯೋಚನೆ ಯೋಜನೆಯಾಗಲೇ ಇಲ್ಲ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ