ಹೇಳಿ ಕೊಡಲು
ನೂರಾರು ಜನ
ಇಹರು
ಅನುಭವಿಸಲು
ಒಬ್ಬನೇ
ಇಹನಯ್ಯಾ !
*
ಬರಹಗಾರ
ನೆಟ್ಟಗಿದ್ದರೆ ತಾನೆ
ಓದು ನೆಟ್ಟಗೆ !
*
ಚಪ್ಪರಿಸದೆ
ಉಣದಿರೆ ಸ್ವಾದವೆ
ಬರಿದೆ ಸಪ್ಪೆ !
*
ಬಸಿರಾದಳು
ಬೇಡವೆಂದು ಗೀಚಿದ
ಕವನದಂತೆ !
*
ನಮ್ಮ ಮುಂದೆ
ಊಟದ ತಟ್ಟೆ ಇಟ್ಟಿದ್ದಾರೆ
ಸಿದ್ಧತೆ ಮಾಡಿಕೊಂಡು
ಕುಳಿತಿದ್ದೇವೆ !
ಊಟ ಈಗ ಬರಬಹುದು
ಮತ್ತೆ ಬರಬಹುದೆಂದು
ಎಷ್ಟು ಹೊತ್ತಾದರೂ
ಬರಲೇ ಇಲ್ಲ
ಆದರೂ,
ನಾವು ಊಟದ ತಟ್ಟೆಯ ಬಿಟ್ಟು
ಏಳಲೆ ಇಲ್ಲ ,ಏಳಲೇ ಇಲ್ಲ !
*
ಹಲವಾರು
ಮಹಾಶಯರಿಗೆ
ನ್ಯಾಯ ಸಿಕ್ಕಿದೆ !
ನಮಗೂ ಸಿಕ್ಕಿದೆ ?
ಮೊನ್ನೆ
ವಠಾರದ ಮೂಲೆಯಲ್ಲಿ
ನಾಯಿ ಸಿಕ್ಕಿದೆ !
*
ಎಲ್ಲರೂ ನಮ್ಮವರೇ ಎಂದುಕೊಳ್ಳುವುದು
ಭ್ರಮೆ.. ನಾನು ನನ್ನದು ಎನ್ನವುದು ಸ್ವಾರ್ಥ
ನಿನಗೆ ನಾನಿದ್ದೇನೆ ಎನ್ನುವುದು ಶುದ್ಧ
ಸುಳ್ಳು... ಸತ್ಯ ಏನೆಂದರೆ ನಿನಗೆ
ನೀನೇ ಹೊರತು ಮತ್ಯಾರೂ ಇಲ್ಲಾ...
*
ಚಂದ್ರನಿರುವನು ಬಾನಿನಲಿ
ಬೆಳಕಿರುವುದು ಮಾತ್ರ ಬುವಿಯಲಿ
ದೂರದಿ ನನ್ನವಳಿಹಳು
ತವರೂರಲಿ ಅವಳಿಹಳು
ನಾನು ಕರೆದಾಗ ಬರುವಳು ಜೊತೆಯಲಿ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!