ಎಲ್ಲವನು ಕಳಕೊಂಡೆನೋ ಅಲೆಯುತಿದೆ ಗೆಳತಿ
ಬಲ್ಲವನು ನಾನೆಂದೆನೋ ತಿವಿಯುತಿದೆ ಗೆಳತಿ
ಕಲ್ಲಿನಲಿ ಕೆತ್ತಿದೆನೋ ಮುನಿಯುತಿದೆ ಗೆಳತಿ
ಕನಸಿನಲಿ ತುಳಿದೆನೋ ತೊರೆಯುತಿದೆ ಗೆಳತಿ
ನೆಮ್ಮದಿಯಲಿ ಇರುವೆನೋ ಬಡಿಯುತಿದೆ ಗೆಳತಿ
ಕನ್ನಡಿಯಲಿ ನೋಡಿದೆನೋ ಜರೆಯುತಿದೆ ಗೆಳತಿ
ಚಿಂತೆಯಲಿ ಕುಸಿದೆನೋ ಮಸೆಯುತಿದೆ ಗೆಳತಿ
ಮರೆಯಲಿ ಮಲಗಿದೆನೋ ಮೊರೆಯುತಿದೆ ಗೆಳತಿ
ಈಶನಲಿ ಸೇರಿದೆನೋ ಪೊರೆಯುತಿದೆ ಗೆಳತಿ
ನನಸಿನಲಿ ಬಂದಿಹೆನೋ ಬೆರೆಯುತಿದೆ ಗೆಳತಿ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!