ಛೇ... ನಾನು ಮಾತು ಕೇಳಿಲ್ಲ, ಹಾಗಾಗಿ ನಿಮ್ಮ ಜೊತೆ ಬದುಕುವ ಅವಕಾಶ ಕಳೆದುಕೊಂಡಿದ್ದೇನೆ. ಅಮ್ಮ ಹೇಳಿದ್ರು, ಶಾಲೆಯಲ್ಲಿ ಟೀಚರ್ ಹೇಳಿದ್ರು, ಪೋಲೀಸ್ ಹೇಳಿದ್ರು ಹೆಲ್ಮೆಟ್ ಹಾಕಿಕೊಂಡು ಗಾಡಿ ಓಡಿಸು ಅಂತ. ನಾನು ಕೇಳಲೇ ಇಲ್ಲ. ನಿನ್ನೆ ಸಂಜೆ‌ ನಡೆದ ರಸ್ತೆ ಅಪಘಾತದಲ್ಲಿ ನಾನು ಪ್ರಾಣ ಕಳೆದುಕೊಂಡಿದ್ದೇನೆ. ಹೆಲ್ಮೆಟ್ ಇತ್ತು. ಕೈಯಲ್ಲಿ, ತಲೆಗೆ ಹಾಕಿಕೊಂಡಿರಲಿಲ್ಲ, ಛೇ ಎಲ್ಲಾ ಆಸೆಗಳು ನಾಶವಾಯಿತು. ನನಗೆ ಮತ್ತೆ ಅವಕಾಶ ಸಿಗೋದಿಲ್ಲ, ಕೇಳಬೇಕಿತ್ತು ಮಾತನ್ನ, ಸುಡುತ್ತಿದೆ ನನ್ನ ದೇಹ, ಇನ್ನು ಅವಕಾಶ ಇಲ್ಲ, ನನ್ನ ಕೈಯಾರೆ ಕಳೆದುಕೊಂಡಿದ್ದೇನೆ ಬದುಕಿನ‌ ಅವಕಾಶವನ್ನ, ನನ್ನ ತಪ್ಪು ನೀವು ಮಾಡಬೇಡಿ.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ