ಕನಸುಗಳ

ಕವಿಯ ಬದುಕಿಂದು

ನನಸಾಗದೆ !

*

ಕವಿಗಳಲ್ಲೂ

ಎರಡು ವಿಧಗಳು

ಒಳ ಹೊರಗೆ !

*

ಚಿಂತನೆಗಳ

ಸುಳಿಯಲ್ಲಿ ಕವಿ

ಬಡವನಾದ !

*

ಸರಸ್ವತಿಯು

ಒಲಿದಳು ಕವಿಗೆ

ಲಕ್ಷ್ಮೀ ದೂರ !

*

ಭ್ರಷ್ಟತೆಯ

ನಡುವಲ್ಲಿ

ನಾವು

ನಮ್ಮ

ತನವನ್ನು

ಉಳಿಸಿಕೊಳ್ಳಲು

ಒದ್ದಾಡುವ

ಕಾಲಘಟ್ಟದಲ್ಲಿ

ಇದ್ದೇವೆ !

*

ಎಲ್ಲಿ 

ಹೋದರೂ

ಕವಿ

ಗೋಷ್ಠಿಗಳಲ್ಲಿ 

ಕವಿಗಳ ಕವಿತೆಯ 

ವಾಚನಕ್ಕೆ 

ಕವಿಗಳೇ ಕಿವಿಗಳು

ಖಾಲಿ ಕುರ್ಚಿಗಳೇ 

ಪ್ರೇಕ್ಷಕರು !

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ