ಚಂದ್ರನ ಜೊತೆಯಲೆ ಸಾಗುವೆಯಾ ಹೇಳೆ ಸಖಿ
ನವಿಲಿನ ತೆರದಲಿ ಕುಣಿಯುವೆಯಾ ಹೇಳೆ ಸಖಿ
ಬಂಧನ ಯಾರಿಗಿಲ್ಲ,ಹರಿವ ನೀರಿಗೂ ತಡೆ ಯಾಕೆ
ಇಬ್ಬನಿ ಚಳಿಯಂತೆ ನಡುಗುವೆಯಾ ಹೇಳೆ ಸಖಿ
ಹೂವಿನಿಂದ ಮಕರಂದ ಹೀರುವ ದುಂಬಿ ನಾನೇನು
ತಪ್ಪುಗಳಿಲ್ಲದೆ ಇದೆಯೆಂದು ಹೇಳುವೆಯಾ ಹೇಳೆ ಸಖಿ
ಸಾಗರದ ಅಲೆಯ ಬದುಕಿನಲ್ಲಿ ಅಬ್ಬರಿಸದಿರು ನೀನು
ಉತ್ಸವದ ಮೂರ್ತಿಯಂತೆ ಇರುವೆಯಾ ಹೇಳೆ ಸಖಿ
ಮನದಾಳದ ಧ್ವನಿಗೆ ಯಾವತ್ತೂ ಬೆಲೆಬರಲಿ ಈಶಾ
ತಾವರೆ ಎಲೆಯ ಹನಿಗಳಲ್ಲಿ ನಲಿವೆಯಾ ಹೇಳೆ ಸಖಿ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!