ಅವಳು ಬೇಸರಗೊಂಡಿದ್ದಾಳೆ. ಬಹುದೊಡ್ಡ ಕಾರಣವೇನಲ್ಲ ಆದರೂ ಅವಳಿಗದೂ ತುಂಬಾ ದೊಡ್ಡದೇ, ಸಣ್ಣದಾದ ಘಟನೆಯೊಂದು ಘಟಿಸಿದೆ. ನೋಡಿದವರಿಲ್ಲ ಆದರೆ ಆ ಘಟನೆಯಲ್ಲಿ ಆಕೆಯೂ ಬಾಗಿ. ಯಾರಿಗೂ ನೋವಿಲ್ಲ, ತೊಂದರೆಯಿಲ್ಲ. ಆಕೆಯ ಮನದೊಳಗೆ ಇದರಿಂದ ಯಾರಿಗಾದರೂ ತೊಂದರೆ ಆದರೆ, ಆಗಿದ್ದರೆ ಹೀಗೆ ಪ್ರಶ್ನೆಗಳಷ್ಟೇ ಏಳುತ್ತಿದೆ. ಅವಳಿಂದ ಏನೂ ತೊಂದರೆ ಆಗಿಲ್ಲ, ಆದರೂ ಸಂಶಯ. ಅದನ್ನ ಜೊತೆಗರನಲ್ಲಿ ಕೇಳಿದಾಗ ಆತನಿಂದ ಬಂದ ಪ್ರತಿಕ್ರಿಯೆ ಆಕೆಗೆ ಸಮಂಜಸವೆನಿಸಲಿಲ್ಲ, ಅದರಲ್ಲಿ ಆಕೆಯ ಮಾತಿನ‌ ಬಗ್ಗೆ ಗೌರವ ಕಾಣಲಿಲ್ಲ. ಅದರಿಂದ ಆಕೆ ಬೆಡಸರಗೊಂಡಳು, ಮೌನವಾದಳು, ಉತ್ಸಾಹ ಕಳೆದುಕೊಂಡಳು. ಈಗಲೂ ಆಕೆಯದ್ದು ಅದೇ ವಾದ, ಆತ ನನ್ನ ಮಾತಿಗೆ ಪ್ರಾಮುಖ್ಯತೆ ನೀಡಲಿಲ್ಲ. ಹಾಗಾಗಿ ಬೇಸರಗೊಂಡಿದ್ದೇನೆ. ಈಗ ಆಕೆಯ ಜೊತೆಗಾರನಿಗೂ‌ ಬಹುದೊಡ್ಡ ಕೆಲಸ. ಸಮಾದಾನ ಮಾಡಲೇ ಬೇಕಾಗಿದೆ. ಬದುಕು ಸಾಗಬೇಕಲ್ವಾ?

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ