ಆಗಾಗ ಸಿಕ್ಕಿದಾಗ ವೇದವ್ಯಾಸರು ಹೇಳ್ತಾ ಇರ್ತಾರೆ, ಮೊದಲು ವಿರಾಮ ಮಾಡುವುದನ್ನು ಕಲಿ ಬದುಕಿನಲ್ಲಿ ವಿರಾಮವಿಲ್ಲದ ಹೋದರೆ ನಿಮಗೆ ತುಂಬಾ ದೂರ ಹೋಗೊದಕ್ಕೆ ಸಾಧ್ಯ ಆಗೋದಿಲ್ಲ ಅಂತ. ಅವರ ಮಾತನ್ನು ನಾನು ಅಷ್ಟಾಗಿ ಒಪ್ಪಿಕೊಂಡಿರಲಿಲ್ಲ. ಆದರೆ ಅವತ್ತು ಬೆಟ್ಟ ಹತ್ತುವ ಕೆಲಸ ಜಾರಿಯಲ್ಲಿತ್ತು. ತುಂಬಾ ದೂರ ಚಲಿಸುವುದಿತ್ತು ಆಗಾಗ ವಿರಾಮ ತೆಗೆದುಕೊಂಡು ಹೋದ ಕಾರಣ ಗೆಳೆಯ ಚಿದಂಬರ ಆರಾಮಾಗಿ ಮೇಲೆ ಹೋಗಿಬಿಟ್ಟಿದ್ದ, ಬೇಗ ತಲುಪಬೇಕು ಅಂತ ವಿರಾಮವಿಲ್ಲದೆ ಓಡಿದ ನಾನು ಅಲ್ಲೇ ಉಳಿದುಬಿಟ್ಟಿದ್ದೆ ಹಾಗಾಗಿ ಅರ್ಥವಾಗಿ ಹೋಯಿತು ವಿರಾಮ ಬರಿಯ ದೇಹಕ್ಕಲ್ಲ ಮನಸ್ಸಿಗೂ ಕೂಡ, ಆಗಾಗ ವಿರಾಮ ನೀಡುತ್ತಾ ಹೋದರೆ ಹೆಚ್ಚು ದೂರವನ್ನು ತಲುಪಬಹುದು. ನಾನು ಒಪ್ಪಿಕೊಂಡೆ ವೇದವ್ಯಾಸರ ಮಾತನ್ನ, ನೀವೂ ವಿರಾಮ ತೆಗೆದುಕೊಳ್ಳಿ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!