ನನ್ನ ತಪ್ಪೇನು ಸುಲಭವಾಗಿ ಕೈಗೆಟ್ಟುತ್ತಿದ್ದದ್ದೇ, ಗೊತ್ತಿಲ್ಲ ನಾನು ತುಂಬಾ ಎತ್ತರ ಬೆಳೆಯುವುದಿಲ್ಲ, ನನ್ನ ಎಲೆಗಳು ಇಷ್ಟೊಂದು ಸುಗಂಧ ಪರಿಮಳವನ್ನು ಬೀರಬೇಕು ಅದನ್ನ ನೀವು ಒಗ್ಗರಣೆಗೆ ಹಾಕಿ ನಿಮ್ಮ ಅಡುಗೆಗೆ ಹಾಕಿ ಅದರ ಸ್ವಾದವನ್ನು ಹೆಚ್ಚಿಸಿಕೊಳ್ಳಬೇಕು ಅನ್ನುವ ಆಸೆ ನನ್ನಲ್ಲಿ ಇರ್ಲಿಲ್ಲ, ನಾನು ನೈಜವಾಗಿ ಬೆಳೆದಿದ್ದೆ ನೀವು ಅದನ್ನು ಕಲಿತುಕೊಂಡರೆ ತಪ್ಪಿಲ್ಲ. ನನ್ನ ಬದುಕಿಗೊಂದು ಅರ್ಥ ಸಿಗುತ್ತದೆ. ಆದರೆ ನನ್ನ ಇಡೀ ಮರದಲ್ಲಿ ಎಲ್ಲಾ ಕಡೆಯೂ ಎಲೆಗಳನ್ನು ಬಿಟ್ಟಿದ್ದೇನೆ ಆದರೆ ನೀವು ನಿಮ್ಮ ಕೈಗೆಟುಕುವ ಎಲೆಗಳನ್ನ ಮಾತ್ರ ಕೊಯ್ದುಕೊಂಡು ನಿಮಗೆ ಬೇಕಾದ ಹಾಗೆ ಬಳಸ್ತೀರಿ , ಇನ್ನು ಬದಲಾಗಬೇಕು ಎಲ್ಲಾ ಕಡೆಗೂ ಕೈಗೆಟಕಿ ಬಿಟ್ಟರೆ ಎಲ್ಲ ಎಲೆಗಳನ್ನು ಕೊಂದು ಬಿಡುತ್ತೀರಿ ,ಕೈಗೆಟುವುದನ್ನು ಮಾತ್ರ ಕೊಯ್ದುಕೊಳ್ತಾ ಇದ್ದರೆ ಉಳಿದದ್ದಾದರೂ ಹಾಗೆ ಉಳಿದುಕೊಂಡಿದೆಯಲ್ಲ ಅನ್ನುವ ನೆಮ್ಮದಿಯಲ್ಲಿರಬೇಕೋ ಎರಡರಲ್ಲಿ ಸರಿಯಾದ ಆಲೋಚನೆ ಯಾವುದು ಅಂತ ಗೊತ್ತಿಲ್ಲ ತಿಳಿದವರು ನೀವು ಹೇಳಿದರೆ ಅರ್ಥ ಮಾಡಿಕೊಳ್ಳುತ್ತೇನೆ. ಬೇವಿನ ಎಲೆಯ ಮಾತಿಗೆ ನಿರ್ಧಾರ ಏನು ಮಾಡಬೇಕು ಅಂತ ಗೊತ್ತಾಗ್ಲಿಲ್ಲ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!