ಕೈಯಲ್ಲಿ ಹಿಡಿದಿರುವ ನನ್ನೊಳಗೆ ಬಂದು ಬದುಕಿನ ಬಗ್ಗೆ ಪಾಠ ಮಾಡುವವರು ಸಾವಿರ ಜನ, ಹೇಗೆ ಬದುಕೆ ಬೇಕು ಅಂತ ಹೇಳಿಕೊಡುತ್ತಾರೆ, ಬೆಳಿಗ್ಗೆ ಏಳುವುದನ್ನು ಹೇಳಿಕೊಡುತ್ತಾರೆ ಯಾವ ರೀತಿಯ ಅಡಿಗೆ ಮಾಡಬೇಕು ಅಂತ ಹೇಳಿಕೊಡುತ್ತಾರೆ ಹೆಚ್ಚಾಗಿ ದುಡ್ಡು ಮಾಡೋದು ಹೇಗೆ ಅನ್ನೋದನ್ನ ಹೇಳ್ಕೊಡ್ತಾರೆ ಪ್ರೀತಿ ಬಗ್ಗೆ ಮನಸ್ತಾಪಗಳ ಬಗ್ಗೆ ಕಳೆದುಕೊಂಡದ್ದನ್ನ ಬಗ್ಗೆ ಅನುಭವಿಸಿದ ಬಗ್ಗೆ ನೋವು ನಲಿವುಗಳೆಲ್ಲವನ್ನ ಅಲ್ಲಿ ಹಂಚಿಕೊಳ್ಳುತ್ತಾರೆ ಕೆಲವರು ಬಟ್ಟೆ ಬಿಚ್ಚುತ್ತಾರೆ ಬಟ್ಟೆ ಹಾಕಿಕೊಳ್ಳುತ್ತಾರೆ ಅವರವರ ಇಷ್ಟಕ್ಕೆ ನನ್ನನ್ನು ಬಳಸಿಕೊಳ್ಳುತ್ತಾರೆ ಹಾಗೆ ಬಳಸಿಕೊಂಡು ಕೆಲವರು ಬೆಳೆದಿದ್ದಾರೆ ಕೆಲವರು ಬೆಳೆಸಿದ್ದಾರೆ ಕೆಲವರು ಬೆಳಿತೇವೇ ಅಂತ ಅಂದುಕೊಂಡಿದ್ದಾರೆ ಹಲವು ಮಂದಿ ಮುಳುಗಿ ಹೋಗಿದ್ದಾರೆ, ಮುಳುಗಿದವರ ಬಗ್ಗೆ ಮಾತನಾಡುವವರೇ ಇಲ್ಲ ಎಲ್ಲರಿಗೂ ಬೆಳೆಯುವ ಆಸೆ ಆದ್ರೆ ಕೊನೆಗೆಲ್ಲಾದರೂ ಒಂದು ಕಡೆ ಮುಳುಗುವಾಗ ತಪ್ಪಲ್ಲವೂ ನನ್ನದೇ ಅಂತ ನನ್ನ ಮೇಲೆ ಹೊತ್ತು ಹಾಕುತ್ತಾರೆ. ಎಲ್ಲವನ್ನ ಕೇಳಿಕೊಂಡು ಸುಮ್ಮನಿದ್ದೇನೆ ನಾನು ಬರಿ ಯಂತ್ರವಷ್ಟೇ, ನನ್ನಲ್ಲೇನೋ ಬದಲಾವಣೆಗಳಾಗುವುದಿಲ್ಲ ನೀವು ನನ್ನನ್ನು ಬಳಸುವ ರೀತಿಯಿಂದಲಷ್ಟೇ ಬದಲಾವಣೆಗಳಾಗುತ್ತವೆ . ಕಾರಣ ನೀವು. ಅನುಭವಿಸುವವರು ನೀವು ನಾನಲ್ಲ ಅದಕ್ಕೆ ಮತ್ತೆ ಹೇಳುತ್ತಿದ್ದೇನೆ ನಾನವನಲ್ಲ.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!