ಪ್ರತಿಭೆಗಳಿಗೆ ಮಿನುಗಲು ವೇದಿಕೆ ಬೇಕು, ರಾತ್ರಿ ಹೆಗಲೆನ್ನದೆ ಪರಿಶ್ರಮ ಪಟ್ಟು ಎಲ್ಲರಿಗಿಂತ ವಿಭಿನ್ನವಾಗಿ ತಾವೇನು ಅಂತ ತೋರಿಸಿಕೊಳ್ಳುವುದಕ್ಕೆ ವೇದಿಕೆಯನ್ನು ಹುಡುಕುತ್ತಿದ್ದಾರೆ. ಹಾಗೆ ವೇದಿಕೆಯ ಮೇಲೇರಿ ಪ್ರತಿಭಾ ಪ್ರದರ್ಶನವನ್ನು ನೀಡಿದರು. ಬಂದವರೆಲ್ಲರಿಗೂ ಇಷ್ಟವಾಗಿದ್ದು ಎಲ್ಲರೂ ಮೆಚ್ಚುಗೆಯನ್ನು ಸೂಚಿಸಿದರು. ಆದರೆ ಕುಳಿತ ತೀರ್ಪುಗಾರರಿಗೆ ಮಾತ್ರ ಒಪ್ಪಿಗೆ ಆಗ್ಲೇ ಇಲ್ಲ. ಅವರ ಮನಸ್ಸಿನಲ್ಲಿ ಕಟ್ಟಿಕೊಂಡಿದ್ದ ಗೂಡಿನೊಳಗೆ ಪ್ರವೇಶಿಸುವ ವಿಚಾರಧಾರೆಗಳಿಗೆ ಮಾತ್ರ ಗೆಲುವು. ಸೋತವರಿಗೆ ನೋವಾದದ್ದು ನಿಜ ಆದರೆ ಎಲ್ಲರ ಮನಸ್ಸಿನಲ್ಲಿ ಗೆಲುವು ಪಡೆದರೂ ತೀರ್ಪುಗಾರರ ತೀರ್ಪಿನಲ್ಲಿ ಮಾತ್ರ ಸೋಲನ್ನಪ್ಪಿ ಕೊಳ್ಳಬೇಕಾಗಿತ್ತು. ಮತ್ತೊಂದು ಹೊಸ ಪ್ರಯತ್ನದ ನಿರೀಕ್ಷೆಯಲ್ಲಿ ಪ್ರತಿಭಾ ಪ್ರದರ್ಶನದ ತಂಡ ತಯಾರಾಗ್ತಾ ಇತ್ತು. ತಾವೇನು ಅನ್ನೋದನ್ನ ತೋರಿಸುವುದಕ್ಕೆ ಹೊರಟಿತ್ರು. ಯಾರನ್ನು ದೂರುವುದಕ್ಕೆ ಹೋಗದೆ ಮತ್ತೊಂದು ವೇದಿಕೆಯ ಮೇಲೆ ತಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಅಣಿಯಾಗಿತ್ತು.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ