ಸಮಾಜದ ಓರೆ ಕೋರೆಗಳ ತಿದ್ದುವುದ್ದಕ್ಕೆ ಪಣ ತೊಟ್ಟಿದ್ದಾನೆ, ತನ್ನ ಜೊತೆ ಸಮಾಜದ ಪ್ರತಿಯೊಬ್ಬರಿಗೂ ಒಳಿತಾಗಲು ಬಯಸಿದ್ದಾನೆ, ರಾತ್ರಿ ಹಗಲೆನ್ನದೆ ದುಡಿಯುತ್ತಾನೆ, ತನಗಿಂತ ಸಮಾಜವೇ ಮೇಲೆ ಬರಲೆಂದು ಆಶಿಸುತ್ತಾನೆ. ಮನೆಗಿಂತ ಹೆಚ್ಚೆ ಸಮಾಜದ ನಡುವೆ ಓಡಾಡುತ್ತಾನೆ, ಆರೋಗ್ಯ ಕೆಡಿಸಿಕೊಳ್ಳುತ್ತಾನೆ, ಕಷ್ಟಕ್ಕೆ ಧಾವಿಸುತ್ತಾನೆ, ಎಲ್ಲೆರನ್ನ ಪ್ರೀತಿಸುತ್ತಾನೆ, ದ್ವೇಷ ಮರೆತಿದ್ದಾನೆ, ಮನೆ ಮರೆತಿದ್ದಾನೆ...ಒಟ್ಟಿನಲ್ಲಿ ತನ್ನ ಬೆಉಕಿನ ಖುಷಿಯನ್ನ ಸಮಾಜದೊಳಗೆ ಕಂಡಿದ್ದಾನೆ. ವರ್ಷಗಳ ದುಡಿಮೆ ಇದ್ದಾರೂ ಮನೆಯನ್ನ ಗಟ್ಟಿಗೊಳಿಸಲು ಸಾದ್ಯವಗಿಲ್ಲ, ಸಮಾಜದೊಳಗೆ ತೊಡಗಿಕೊಂಡು ಅದನ್ನ ಉಸಿರಾಗಿಸಿದ್ದಾನೆ , ಸಮಾಜದಿಂದ ದೂರ ನಿಲ್ಲಿಸಿದರೆ ಉಸಿರಾಡಲು ಪರದಾಡುತ್ತಾನೆ... ಸಮಾಜಕ್ಕೆ ನಿಂತಮೇಲೆ ಸಮಾಜವೂ ಅವನ ಜೊತೆಗಿದ್ದರೂ ಬದುಕು ನಗಬಹುದು, ಜೊತೆಗೆ ಬದುಕಬಹುದು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!