ಲೋಕದ ಜನ
ಡೊಂಕೆನ್ನದಿರಿ
ನಮಗೆ ನಾವೇ
ಡೊಂಕು ಬಾಳಲಿ !
*
ಕೊಡು ಬೆಳಕ
ಕರ್ಪೂರದಂತೆ,ಈಶಾ
ಜಗದೊಳಗೆ !
*
ಕಾಮ ಜ್ವರಕೆ
ಮದ್ದಿಲ್ಲವೊ ನೀ ತಿಳಿ
ಸಂನ್ಯಾಸಿಯಾಗೊ !
*
ನೋವು ಕೊಡದೆ
ಯಾರಿಗೂ ಮಾತಾಡದೆ
ನೀ ಕವಿಯಾಗು !
*
ಸುಮ್ಮನಿರುವುದ ಕಲಿ
ಲೋಕದ ಬೆಳಕಿನಲಿ
ತಿರುಗುತಲಿ ಓದುತ
ಜ್ಞಾನಿಯಾಗು ಬುವಿಲಿ !
*
ಮತ್ತಿಹುದಯ್ಯ
ಮುತ್ತಿನಾ ಲೋಕದಲಿ
ಪ್ರೀತಿ ಜೊತೆಗೆ !
*
ಬಡ ಕವಿಯು
ಸಿರಿವಂತ ಕವಿಯ
ಗುಲಾಮನಯ್ಯಾ !
*
ಕವಿಗಳಲ್ಲೂ
ಎರಡು ವಿಧವಯ್ಯಾ
ಜಾತಿ ವಿಜಾತಿ !
*
ಕಪ್ಪೆಗಳಂತೆ
ವಟಗುಟ್ಟುತ್ತಲಿರೇ
ಕವಿಪುಂಗವ !
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!