ಮೌನ ನಮ್ಮ ಹೃದಯ ಭಾಷೆ ಆಗಲೆಂದೂ ಗೆಳತಿ
ಸೋಲು ಬರದೆ ಇರಲಿ ಇಂದು ಕಾವಲೆಂದೂ ಗೆಳತಿ
ಭೇದ ಭಾವ ಸೋಲಿನಲ್ಲಿ ನಲುಗಿ ಮುರುಟಿತು ಯಾಕೆ
ಕನಸು ಕರಗಿ ನನಸಿನಲ್ಲಿ ಕರಗಿ ಹೋಗಲೆಂದೂ ಗೆಳತಿ
ಜೀವದೊಲುಮೆ ವಿಷದ ಕುಲುಮೆ ಆಗದಿರಲಿ ಇಂದು
ಚಿಂತೆ ಕಳೆದ ಬಾಳ ಪಯಣ ಹಾಗೆ ಮಾಗಲೆಂದೂ ಗೆಳತಿ
ಹಸಿರು ಸಿರಿಯ ಹೊದ್ದ ಗಳಿಗೆ ನೆಲವು ನಲಿಯಿತಿಂದು
ಕುಸುರಿ ಕೆಲಸ ಸೊಬಗ ತೋರೆ ಕಲೆಯಲೆಂದೂ ಗೆಳತಿ
ಜಾತಿ ಬಣ್ಣ ಹೊರಗೆ ಸುಣ್ಣ ಮೆತ್ತ ಬೇಡ ಹೀಗೆ ಈಶಾ
ತನುವ ಬೆಸೆದ ಪ್ರೀತಿ ಒಡಲು ಸಾಗಲೆಂದೂ ಗೆಳತಿ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!