ಕುಡಿಯಬಾರದೆನ್ನುವರೆ ಕುಡಿದು ಬೀಳುತ್ತಾರೆ ಇಲ್ಲಿ

ಹೊಡೆಯಬಾರದೆನ್ನುವರೆ ಹೊಡೆದು ಸಾಯುತ್ತಾರೆ ಇಲ್ಲಿ

 

ಚಿಪ್ಪಿನೊಳಗೆ ಮುತ್ತು ಇಹುದೆ ಮತ್ತು ಸಿಗದೆ ಹೇಳು

ಪಡೆಯಬಾರದೆನ್ನುವರೆ ಪಡೆದು ಬೆರೆಯುತ್ತಾರೆ ಇಲ್ಲಿ

 

ಸ್ನೇಹದೊಳಗೆ ವಿಷವು ಇರಲು ಪ್ರೀತಿ ಇಂದು ಕಂಡಿತೆ

ಕೊಲ್ಲಬಾರದೆನ್ನುವರೆ ಕಡಿದು ಮೆರೆಯುತ್ತಾರೆ ಇಲ್ಲಿ

 

ಬೆತ್ತಲಾದ ಜನರ ಸುತ್ತ ಹೊಸತು ವರುಷ ಹರುಷ

ಹಡೆಯಬಾರದೆನ್ನುವರೆ ಹಡೆದು ಮಲಗುತ್ತಾರೆ ಇಲ್ಲಿ

 

ಬಂಧನದ ಬೇಡಿಗಳನು ಹೇಗೆ ಕಳಚುತಿಹರು ಈಶಾ

ಸಿಡಿಯಬಾರದೆನ್ನುವರೆ ಸಿಡಿದು ಬಾಳುತ್ತಾರೆ ಇಲ್ಲಿ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ