ಹಸಿರಿಂದ ತುಂಬಿರುವ ಭೂಮಿಯನು, ನೋಡಿದೆನು ಸಖಿ

ಕೆಸರಲ್ಲಿ ಅರಳಿರುವ ತಾವರೆಯ, ಕಾಡಿದೆನು ಸಖಿ

 

ವಿಪರೀತ ಎನಿಸುವಾ ಬದುಕಲ್ಲಿ, ಏನಿದೆಯೊ ಸವಿ

ಕನಸಿನಲಿ ಜೊತೆಗಾರ ನನಸಂತೆ, ಮೂಡಿದೆನು ಸಖಿ

 

ಚಿಂತಿಸುವ ಸರಕಿಂದು ಬರದಿರಲಿ, ತಲೆಯಲ್ಲಿ ತಿಳಿ

ಚಿಂತನೆಗೆ ಸಾಗುತಿಹ ವಿಷಯವನು, ಬೇಡಿದೆನು ಸಖಿ

 

ಉಪ್ಪರಿಗೆ ಹಜಾರದಿ ನಲಿದೆ,ನೀ ಹೃದಯದಿ ನಲಿ

ಮೋಹವದು ತುಂಬುತಿರೆ ಒಲವಿನಲಿ, ಹಾಡಿದೆನು ಸಖಿ

 

ಸವಿಯಾದ ತನುವಲ್ಲಿ ಮನವಿರಲು, ಬಾ ಸಖಿಯೆ ಬಳಿ

ಇಷ್ಟವಾಗೆ ನಿನಗಿಲ್ಲಿ  ಪ್ರೀತಿಯನು, ನೀಡಿದೆನು ಸಖಿ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ