ನನ್ನ ಹೃದಯದ ಒಳಗೆ, ನೀ ಆಡು ಓ ಚೆಲುವೆ
ನಿನ್ನ ಒಲವನು ನನಗೆ, ನೀ ಕೊಡು ಓ ಚೆಲುವೆ
ಮತ್ಸರದ ನೋಟಕೆ, ಒಲುಮೆ ಗತಿಸುವುದೇನೆ
ಮೌನದಾಳದ ನಡುವೆ, ನೀ ಕಾಡು ಓ ಚೆಲುವೆ
ಉಕ್ಕಬಹುದು ಸವಿಯು, ನೆನಪುಗಳ ನಡುವೆ
ಹೊತ್ತೇರಿದರೂ ಬೆಸುಗೆ, ನೀ ಹಾಡು ಓ ಚೆಲುವೆ
ಅಂತರಂಗದ ಭಾವ ಸಿಕ್ಕೊಳಗೆ ಸಿಲುಕಿದೆಯಾ
ಕೈ ಹಿಡಿದು ನಡೆಯದಿರೆ, ನೀ ಬೇಡು ಓ ಚೆಲುವೆ
ಈಶ ಮರೆತಿಹ ವಿಷಯ, ಮರೆತು ಬಿಡು ಅರಗಿಣಿಯೇ
ಒಲವು ತುಂಬಿಹ ತನುವ, ನೀ ಕೂಡು ಓ ಚೆಲುವೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!