ಯಾವುದಕ್ಕಾಗಿ ದ್ವೇಷಿಸುತ್ತಾರೋ ಅವರ ಬಗ್ಗೆಯೆ ಅನುಕಂಪದಿಂದ ಇರೋಣ

ಯಾರು ನಮ್ಮೊಂದಿಗೆ ನಡೆಯುತ್ತಾರೋ ಅವರೊಡನೆ ಪ್ರೀತಿಯಿಂದ ಇರೋಣ

 

ಜೀವನವೆಂದರೆ ಏಳು ಸುತ್ತಿನೊಳಗಿನ ಕಂದಕದ ಕೋಟೆಯೆಂದೇ ಹೇಳುವಿಯಾ

ಸೋತವರು ಹತ್ತಿರವಿದ್ದರೆ ಅವರನ್ನು ಕೈ ಹಿಡಿಯುತ್ತಲೆ ಕರುಣೆಯಿಂದ ಇರೋಣ

 

ಬರೆದುದೆಲ್ಲವನ್ನು ಹರಿದು ರದ್ದಿಯೊಳಗೆ ಬಿಸಾಡುತ್ತಿದ್ದರೆ ಸಾಹಿತ್ಯ ಯಾಕೆ ಬೇಕು

ಮಾತಿನೊಳಗೆ ಸೌಧವನ್ನು ಕಟ್ಟುವವರ ಜೊತೆಗೇ ಹುಷಾರಿಯಿಂದ ಇರೋಣ

 

ಒಲವೆಂದರೆ ನಾವು ನಮ್ಮೊಳಗೆ ತಿಳಿದಷ್ಟು ಸುಲಭದ ವಸ್ತುವಲ್ಲವೋ ಅರಿಯು

ಪ್ರೇಮದೊಳಗೂ ಹಲವು ಕಣ್ಣಿದೆಯೆನ್ನುವವರ ಒಟ್ಟಿಗೇ ಹಿಂದಿನಿಂದ ಇರೋಣ

 

ಪ್ರತಿಯೊಂದು ಮರದಲ್ಲೂ ಹೂವುಗಳು ಬಿಟ್ಟಾಗಲಷ್ಟೇ ಪ್ರೀತಿಯರಳುತ್ತದೆ ಈಶಾ

ಯೌವನದಲ್ಲೂ ಕಡಿವಾಣವಿದೆಯೆನ್ನುವವರ ಹಿಂದೆಯೇ ದೂರದಿಂದ ಇರೋಣ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ