ಬದುಕು ನನ್ನ ಪಾಲಿಗೆ ಬದಲಾಗಲೇ ಇಲ್ಲ 

ನಲಿವು ನನ್ನ ಪಾಲಿಗೆ ಸವಿಯಾಗಲೇ ಇಲ್ಲ 

 

ಕಬ್ಬದು ನನ್ನ ಪಾಲಿಗೆ ಸಕ್ಕರೆಯಾಗಲೇ ಇಲ್ಲ 

ಬತ್ತವು ನನ್ನ ಪಾಲಿಗೆ ಸಿರಿಯಾಗಲೇ ಇಲ್ಲ 

 

ಒನಪು ನನ್ನ ಪಾಲಿಗೆ ಒಲವಾಗಲೇ ಇಲ್ಲ 

ಸುಖವು ನನ್ನ ಪಾಲಿಗೆ ಗೆಲುವಾಗಲೇ ಇಲ್ಲ 

 

ಚಿನ್ನವು ನನ್ನ ಪಾಲಿಗೆ ಹೊಳಪಾಗಲೇ ಇಲ್ಲ 

ರನ್ನವು ನನ್ನ ಪಾಲಿಗೆ ಚೆಲುವಾಗಲೇ ಇಲ್ಲ 

 

ಈಶನು ನನ್ನ ಪಾಲಿಗೆ ದೇವನಾಗಲೇ ಇಲ್ಲ 

ಜೀವನ ನನ್ನ ಪಾಲಿಗೆ ಬೆಳಕಾಗಲೇ ಇಲ್ಲ 

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ