ಮಧುರ ಕ್ಷಣಗಳ ಅರಿವಿದೆ ಸವಿ

ಬದುಕಿಗೆ ಸುಂದರ ಅರ್ಥವಿದೆ ಸವಿ

 

ಪ್ರೀತಿಯ ತಂತಿಗೆ ಮನವಿದೆ ಸವಿ

ಕೈಯಬಳೆ ಸದ್ದಿಗೆ ತನುವಿದೆ ಸವಿ

 

ತುಟಿಗೆ ಮೀರಿದ ಚೆಲುವಿದೆ ಸವಿ

ಚೈತ್ರದ ಸೊಗಸಿಗೆ ದಿನವಿದೆ ಸವಿ

 

ರಾತ್ರಿಯ ಚಂದಿರನಿಗೆ ಒಲವಿದೆ ಸವಿ

ತಾರೆಯ ನೋಟದಲಿ ಗೆಲುವಿದೆ ಸವಿ

 

ಈಶನೊಲವಿಗೆ ಬಿರಿದ ಫಲವಿದೆ ಸವಿ

ಮನದರಸಿಗೆ ಭವಿಷ್ಯದ ಕುಲವಿದೆ ಸವಿ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ