ಆತನಿಗೆ ಚಪ್ಪಾಳೆ‌ ಶಿಳ್ಳೆಗಳ ನಡುವೆ ಮಿಂಚುವ ಆಸೆ. ರಂಗಂಮಚದ ಮೇಲೇರಿ ಎಲ್ಲರ ನಗಿಸಬೇಕು, ಅಳಿಸಬೇಕು, ಎಲ್ಲರ ಕಣ್ಣಾಲಿಗಳು ತುಂಬಿಕೊಳ್ಳಬೇಕು, ಹೀಗೇ ಏನೇನೋ ಆಸೆ. ಆದರೆ ಬದುಕಿನ ಜವಾಬ್ದಾರಿಗಳು ದೂರದಲ್ಲಿ ಬರಿಯ ರಂಗಮಂಚವನ್ನ ನಿಂತು ನೋಡುವ ಭಾಗ್ಯವಷ್ಟೇ ಸಿಕ್ಕಿದೆ. ಕಾಯುತ್ತಿದ್ದಾನೆ ತನ್ನ ದಿನಗಳಿಗೆ.. ಆತ ಕತೆಗಳೋ ಭಾವಗಳೋ ಹೊಸ ಪಾತ್ರಗಳಲ್ಲಿ ಮತ್ತೆ ಜೀವಿಸಬೇಕು, ಬದುಕಬೇಕು...ದಿನಗಳಿಗೆ ಕಾಯುತ್ತಿದ್ದಾನೆ…

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ