ಅಲೆಯಲ್ಲಿ ತೇಲುತ್ತ ಬಾಗುತ್ತ ಸಾಗುತಿಹ
ಹಾಯಿದೋಣಿಯ ನಾ ಕಂಡಿಹೆನು
ಚೆಲುವನ್ನು ನಾ ಉಂಡಿಹೆನು
ಅದರಾ ಒಳಗಲ್ಲಿ ಕುಳಿತಿದ್ದ ಚೆಲುವೆ
ನೋಡುತಲೆ ನಾ ಮರುಳಾಗಿಹೆನು
ಸವಿನೋಟಕೆ ಸವಿಯಾಗಿಹೆನು
ಉಬ್ಬರದ ನಡುವೆಯೂ
ಪ್ರೀತಿ ಚಿಗಿದಿದೆ ನೋಡು
ಬಾಳ ಒಲುಮೆಯ ಕಂಡಿಹೆನು
ಕೈಹಿಡಿಯುತ ಕುಳಿತಿಹೆನು
ಖುಷಿಯ ಕಂಬದ ಬಳಿಯೆ
ಕುಳಿತೆ ಅವಳಾ ಸನಿಹ
ನೋಡಿ ಮುಗುಳು ನಕ್ಕಿಹೆನು
ಮೈಮರೆತು ನಾ ಗೆಲುವಾಗಿಹೆನು
ಪ್ರೀತಿಯಲೆಯಾ ಪ್ರೇಮದ ನಡುವೆ
ಬೇರೆಯೇನು ಕಾಣದಾಗಿಹೆನು
ಕನಸಿನಲ್ಲಿ ಒಲವನುಂಡಿಹೆನು
ಮನಸ ಕೊಟ್ಟು ಬೇಡಿಕೊಂಡಿಹೆನು
ಹಿತದ ಮಾತು ಆಡಿದಾಗ
ಕಣ್ಣ ನೋಟ ಬೆರೆಸಿದಾಗ
ಮೌನ ಮುರಿದೆನ್ನ ತಬ್ಬಿಕೊಂಡಿಹಳು
ಮುತ್ತನಿಟ್ಟು ಮದುವೆಯಾಗಿಹಳು
ಮಗುವ ಹೆತ್ತು ತಾಯಿಯಾಗಿಹಳು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!