ಅಬ ತೇರೆ ಬಿನ್ ಜೀ ಲೇಂಗೆ ಹಂ ಇದರ ಕೆಲವೇ ಸಾಲನ್ನು ಅನುವಾದ ಮಾಡಿ ಈ ಹಿಂದೆ ಹಂಚಿಕೊಂಡಿದ್ದೆನಷ್ಟೆ . ಈಗ ಅದರ ಪೂರ್ತಿ ಅನುವಾದ
ಮಾಡಿದ್ದೇನೆ .
ನೀನಿಲ್ಲದೆ ಇನ್ನು ಬದುಕುವೆನು ನಾ
ಕಹಿ ಬಾಳಿನ ವಿಷವ ಕುಡಿಯುವೆನು ನಾ
ಏನಿದು ನನ್ನೆದೆ ಒಡೆದೇ ಹೋಯಿತು
ನಿನ ಪ್ರೀತಿಯು ಬಳಿಯಿತು ಬಾಳಿಗೆ ಬಣ್ಣವ
ನಾ ಪ್ರೀತಿ ಮಾಡಿದೆ ನೀ ಮಾಡಿದೆ ಮೋಸವ
ತಪ್ಪೆಲ್ಲ ನನ್ನದೇ
ನಿನ್ನ ಪ್ರೀತಿ ಮಾಡಿದೆ
ನಿಷ್ಠೆಯಿಲ್ಲದೋಳ ನಿಷ್ಠೆಯನ್ನು ಬಯಸಿದೆ
ಅರಿಯೆ ನೀನು ಪ್ರೀತಿ
ನಿರ್ದಯಳು ಕಠಿಣ ಹೃದಯಿ
ಕಲ್ಲೆದೆಯ ಕಟುಕಿ ನೀನು
ಕಂಡೆ ನಿನ್ನ ಪ್ರೀತಿ ಈಗ
ನಾ ಅರಿತೆ ನೀ ನಿರ್ದಯಿ
ನಾ ಮುರಿಯುತಿದ್ದೆ ಪ್ರೇಮದ ವಚನವ
ಅರಿತಿದ್ದರೆ ನಿನ್ನಯ ಮನಸನು
ಯಾರ ನಾನು ಬಯಸಿದೆ
ಎಲ್ಲಿ ಪ್ರೀತಿ ಮಾಡಿದೆ
ನಾ ಮೂರ್ಖನು
ತಿಳಿಯದಾದೆ
ನನ ಕಣ್ಣ ಹನಿಯ ಮುತ್ತು
ಕಣ್ಣಲ್ಲಿ ಹರಿವ ನೀರು
ಒಡೆದಂಥ ಎದೆಯ ಚೂರು
ನಿನ್ನಲ್ಲಿ ಇಟ್ಟೆ ಪ್ರೀತಿ ಪ್ರೇಮವ
ಮೆರೆಯುವೆನು ಹೇಗೆ ನಿನ್ನ ಪ್ರೇಮವ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!