ನಾನು ಈ ಹಿಂದೆ ಈ ಹಾಡಿನ ಕೆಲವೇ ಸಾಲು ಅನುವಾದ ಮಾಡಿದ್ದೆ. ಈಗ ಇಡೀ ಹಾಡಿನ ಅನುವಾದ ಇಲ್ಲಿದೆ ನೋಡಿ.


ಬದುಕುವೆನು ನಾ ಯಾರಿಗಾಗಿ

ಸಾಯುವೆನು ನಾ ಯಾರಿಗಾಗಿ

ಆ ಹುಡುಗಿ ನೀನೇನೆ

ನೀನೆ ನನ ಪ್ರಾಣ


ನಿನ್ನದೇ ಚರ್ಚೆ ನಿನ್ನದೇ ಮಾತು

ತುಟಿಯಲ್ಲಿ ನಿನ್ನದೇ ಹೆಸರು

ನಿನ್ನಾಣೆ ನಲ್ಲೇ ನಿನ್ನಿಂದಲೇ

ನನ ಬೆಳಗು ಸಂಜೆಯೂ

ನಾನೇನೆ  ಆ ಹುಡುಗ

ನಿನ್ನನ್ನೇ ಪ್ರೀತಿಸುವೆ

ನೀನೇನೆ ಆ ಹುಡುಗಿ

ನಾ ನಿನ್ನನ್ನೇ ಪ್ರೀತಿಸುವೆ


ನೀ ನನ್ನ ಚೈತ್ರ

ನೀ ನನ್ನ ಪ್ರೀತಿ

ನೀನೆ ಆಕಾಂಕ್ಷೆಯು 2

ಕಣ್ತುಂಬ ನಾನು

ನೋಡುವ ಕನಸು

ಎಂದೂ ನಿನ್ನದೇ

ಅದು ಎಂದೂ ನಿನ್ನದೇ

ಬದುಕುವೆನು ನಾ

ಹೇಗೆ ನೀನಿಲ್ಲದೆ

ನೀ ನನ್ನ ಪ್ರಾಣವೇ

ನೀನೇನೆ ಆ ಹುಡುಗಿ

ನಿನ್ನನ್ನೇ ಪ್ರೀತಿಸುವೆ