ಈ ಹಾಡನ್ನು ಅರ್ಧ ಅನುವಾದ ಮಾಡಿ ಹಿಂದೆ ಸಂಪದದಲ್ಲಿ ಹಾಕಿದ್ದೆ. ಈಗ ಅದನ್ನು ಪೂರ್ತಿಗೊಳಿಸಿದ್ದೇನೆ. ಇದು 1980 ರಲ್ಲಿ ತೆರೆಕಂಡ ಮನೋಕಾಮನಾ ಎಂಬ ಚಿತ್ರದಲ್ಲಿ ಸಂಗೀತ ನಿರ್ದೇಶಕ ಶ್ರೀ ಬಪ್ಪಿ ಲಹರಿ ಅವರು ತಮ್ಮದೇ ಸಂಗೀತನಿರ್ದೇಶನದಲ್ಲಿ ಇದನ್ನು ಹಾಡಿದ್ದರು.
ಪ್ರೀತಿ ಬೇಕಿದೆ ನಾನು ಬದುಕಲು
ನನಗೋ ಪ್ರತಿಕ್ಷಣ ನಿನ್ನ ಹಾಜರಿ ಬೇಕಿದೆ
ಪ್ರೀತಿ ಬೇಕಿದೆ ನಾನು ಬದುಕಲು
ನನ್ನ ಹೊರತು ಬೇರೆ ಯಾರನು ನೀನು
ಹೃದಯದಿ ಸೇರಿಸಿಕೊಳ್ಳೆ
ಹೂವಲಿ ಅಷ್ಟೇ ಏನು
ಮುಳ್ಳಲೂ ಜತೆಗೆ ನಡೆವೆ
ನಿನ ಪ್ರೀತಿ ಬೇಕಿದೆ ನಾನು ಬದುಕಲು
ಹಗಲಿರುಳು ಪ್ರೀತಿಯ ಆಶ್ವಾಸನೆ ಬೇಕಿದೆ
ಪ್ರೀತಿ ಬೇಕಿದೆ ನಾನು ಬದುಕಲು
ರೂಪ ಲಾವಣ್ಯ ಲೋಕಕ್ಕೆ ಬೇಕು
ನನಗೋ ಮನಸ್ಸಿನ ಚೆಲುವು
ನಿನ್ನಲಿದೆ ಅದು ತಾನು
ನಿನ ಪ್ರೀತಿ ಬೇಕಿದೆ ನಾನು ಬದುಕಲು
ಎಂಥ ಬಿರುಗಾಳಿಯಲ್ಲೂ ತೋಳಿನ ಆಸರೆ
ನಿನ ಪ್ರೀತಿ ಬೇಕಿದೆ ನಾನು ಬದುಕಲು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!