ದರಪಣ್ ಕೋ ದೇಖಾ ಈ ಹಾಡನ್ನು ಮುಕೇಶ್ ಹಾಡಿದ್ದು ಹಿಂದೆ ಅರ್ಧ ಅನುವಾದ ಮಾಡಿದ್ದೆ ಈಗ ಹಾಡಿನ ಪೂರ್ತಿ ಅನುವಾದ ನೋಡಿ. ಅನುವಾದವು ಎಂದಿನಂತೆ ಮೂಲದ ಧಾಟಿಯಲ್ಲೇ ಇದೆ.
ಕನ್ನಡಿಯಾ ಕಂಡೆ
ನೀನು ಕುಂಕುಮ ಇಡುವಾಗ
ಹೂವುಗಳ ಕಂಡೆ
ನೀನು ಜಡೆಯಲಿ ಮುಡಿವಾಗ
ನನ ನಸೀಬೇ ಖೋಟಾ ಇದೆ
ನನ ನೋಡಲೇ ಇಲ್ಲ ಒಮ್ಮೆಯೂ
ಕನ್ನಡಿಯಾ ಕಂಡೆ
ನೀನು ಕುಂಕುಮ ಇಡುವಾಗ
ಸೂರ್ಯನ ಮೊದಲ ಕಿರಣ ಕಂಡೆ
ಬೆಳಗಿನ ಹೊತ್ತು ಏಳುತಲಿ
ಇರುಳಲಿ ಕಂಡೆ ತಾರೆಗಳನ್ನ
ಮಂಚದಿ ನೀನು ಮಲಗುತಲಿ
ಹೀಗೆ ಒಂದಲ್ಲ ಒಂದು ಕಾರಣದಿ
ನೀನು ಕಂಡೆ ಜಗವನೂ
ಕನ್ನಡಿಯಾ ಕಂಡೆ
ನೀನು ಕುಂಕುಮ ಇಡುವಾಗ
ಕಾಡಿಗೆಯ ಭಾಗ್ಯವದೇನೋ ಕಾಣೆ
ಕಣ್ಣಲಿ ನೀನು ಧರಿಸಿರುವೆ
ಸೆರಗಿನ ಪುಣ್ಯವದೇನೋ ಕಾಣೆ
ಇದೆಯಲ್ಲ ನಿನ ಮೈ ಮೇಲೆ
ಆಸೆಯು ಉಳಿದಿದೆ ಎದೆಯಲ್ಲಿ
ಆಗಲು ಕೊರಳ ಹಾರವು
ಕನ್ನಡಿಯಾ ಕಂಡೆ
ನೀನು ಕುಂಕುಮ ಇಡುವಾಗ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!