ಹಿಂದೆ ಈ ಹಾಡಿನ ಕೆಲವು ಸಾಲಿನ ಅನುವಾದ ಮಾಡಿದ್ದೆ. ಈಗ ಇಡೀ ಹಾಡಿನ ಅನುವಾದ (ಅದೇ ಧಾಟಿಯಲ್ಲಿ) ಇಲ್ಲಿದೆ ನೋಡಿ.

ಹೋದವು ಎಲ್ಲಿ ಆ ದಿನ

ನನ ದಾರಿ ಆಕೆ ಕಾಯುತ

ನಾ ಕಂಡಾಗ ನಲಿಯುತ್ತಿದ್ದಳು

ಎಲ್ಲೇ ಇರು ನೀಹೇಗೇ ಇರು

ಬಾಳುದ್ದಕೂ ನಿನ್ನ ಬಯಸುವೆ

ನಿನ್ನನ್ನು ಮರೆಯಲಾರೆನು

 

ನನ್ನ ಹೆಜ್ಜೆಯು ಎಲ್ಲೇ ಬೀಳಲಿ

ಸಿಂಗರಿಸುತಿದ್ದಳು ಈ ಗೆಳತಿಯು

ನನ್ನನ್ನು ಅಳಿಸಿ ಖುಷಿ ಪಟ್ಟಿತು

ತಂಪಾಗಿ ಬೀಸೋ ಗಾಳಿಯು

          ಹೋದವು ಎಲ್ಲಿ ಆ ದಿನ

 

 

ನನ್ನ ಪಾಲಿಗೆ ಇತ್ತೀಚೆಗೆ

ಹಗಲು ಕೂಡ ಇರುಳಾಗಿದೆ

ನೆರಳೊಂದು ಜತೆಯಿತ್ತು ಆ ದಿನ

ನೆರಳೊಂದೆ ಜತೆಗೆ ಈ ದಿನ

        ಹೋದವು ಎಲ್ಲಿ ಆ ದಿನ