ಅವಳು ದೂರವಾದಾಗ ಗುರುವಾದೆ ಏಕೆ

ಇವಳು ಹತ್ತಿರವಾದಾಗ ಬಿಲವಾದೆ ಏಕೆ

 

ಬಿರುಸಾದ ನುಡಿಯಲ್ಲಿ ಏನಿದೆಯೊ ಏನೊ

ಜೀವನವು ಮೃದುವಾದಾಗ ಬಲವಾದೆ ಏಕೆ

 

ತಪ್ಪಿರುವ ಕಡೆಯಲ್ಲಿ ಒಪ್ಪದುವು ಬರುವುದೆ

ತನುವದುವು ಜಲವಾದಾಗ ಒಲವಾದೆ ಏಕೆ

 

ಮುದಿಡಿರುವ ಹೂವಲ್ಲಿ ಕಂಪದುವು ಇರುವುದೆ

ಚಿಂತೆಯಿಂದು ಮುಳುವಾದಾಗ ಸುಪ್ತವಾದೆ ಏಕೆ

 

ಮರೆತಿರುವ ಪ್ರೀತಿಯಲಿ ಸುಖವಿಹುದೆ ಈಶಾ

ಮತ್ಸರವದುವು ಚೆಲುವಾದಾಗ ಕದವಾದೆ ಏಕೆ?

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ