ಸೂಟು ಬೂಟುಗಳಿಗೇನು ಗೊತ್ತಿದೆ
ಲಾಟಿ ಹಿಡಿದವರಿಗೇನು ತಿಳಿದಿದೆ
ರಸ್ತೆ ಬಂದು ಮಾಡಿಸಿದರೇನು ?
ರಸ್ತೆಯಲೆ ಮಲಗಿ ಎದ್ದರೇನು ?
ರೈತ ಹಾಯಾಗಿ ಬದುಕುವನೆ ?
ಉಳುವವನೆ ಹೊಲದೊಡೆಯಾ
ಬೆಳೆದವನೇ ಬೆಳೆಗಳಿಗೊಡೆಯಾ
ಬೆಳೆಯುವವರೆಗೆ ಮಾತ್ರ ಒಡೆಯಾ
ಎಂದಾದರೆ ಅತನ ರೈತನೆನುವರೆ ?
ಬರಿದೆ ಅಧಿಕಾರ ಅಂತಸ್ತು ಮಹದಾಸೆಗೆ
ರೈತನ ಸೇವಕರೆನುವರು ಜೈಕಾರ ಹಾಕುವರು
ಇವರ ಮಾತುಗಳಿಗೆ ರೈತ ತಲೆದೂಗಿ ಓಟು
ಹಾಕಿದನೋ ? ರೈತ ಬೀದಿಗೆ ಅವ ಉಪ್ಪರಿಗೆಗೆ !
ರೈತರೆ ಎಚ್ಚರಗೊಳ್ಳಿರಿ ನಿಮ್ಮ ತನವನು ನೀವೇ
ಕಂಡು ಉಣ್ಣಿರಿ ! ಇವರ ವಂಚನೆಗೆ ಬೇಲಿ ಕಟ್ಟಿರಿ
ತಮಗಿರುವ ಭೂಮಿಯಲೆ ನಿಮಗಾಗುವಷ್ಟು
ಬೆಳೆಯ ಬೆಳೆಯುತ ಹಾಯಾಗಿ ಬದುಕಿರಿ !
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಅಂತರ್ಜಾಲ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!