ನಾನು ಸಾಮಾನ್ಯದವನಲ್ಲ, ನಿಂತಿರುತ್ತೇನೆ, ನಾವೆಲ್ಲರೂ ಇಲ್ಲಿ ಕುಳಿತು ನಿಮ್ಮ ಬದುಕಿನ ದಾರಿ ಹುಡುಕಿ ಹೊರಡ್ತೀರಾ? ನೀವಿಲ್ಲಿ ಕುಳಿತಿದ್ದಾಗ ನೀವು ಕಂಡ ಕನಸುಗಳೇನೋ ಆಮೇಲೆ ಹೊರಟ ದಾರಿಗಳೇನೋ? ನೀವಿಲ್ಲಿ ಕುಳಿತಿದ್ದಾಗ ನಿಮ್ಮ ಕನಸುಗಳಲ್ಲಿ ಡಾಕ್ಟರ್, ಇಂಜಿನಿಯರ್, ಟೀಚರ್, ಡ್ಯಾನ್ಸರ್, ಆಟಗಾರ ಹೀಗೆ ಸಾಗುವ ದಾರಿಗಳಿಗೆ ಬೇಕಾದ ಇಂದನಗಳನ್ನ ತರಗತಿಯೊಳಗೆ ಇಂದನ ತುಂಬಿಸಿಕೊಂಡು ಹೊರಜಗತ್ತಿಗೆ ಕಾಲಿಟ್ಟವ. ಹಲವು ಕನಸುಗಳು, ಹಲವು ಮನಸುಗಳು ನನ್ನ ಮೇಲೆ ಕುಳಿತು ಬರೆದು ಹೊರಟು ಹೋಗಿದ್ದಾರೆ, ಎಲ್ಲರೂ ಕಂಡ ಕನಸಿನ ಹಿಂದೆಯೇ ಹೋದವರಲ್ಲ, ಕೆಲವರು ಜವಾಬ್ದಾರಿಗಾಗಿ ಎಲ್ಲವನ್ನ ತೊರೆದು ಬದುಕಿದವರು. ನಿನಗೂ ಹೇಳೋದಿಷ್ಟೆ ಬದುಕು ಸುಂದರವಾಗಿರುತ್ತೆ, ಪ್ರಕಾರ ಪ್ರೀತಿಯಿಂದ ಜೀವಿಸು..ತಪ್ಪು ದಾರಿ ಹಿಡಿಬೇಡ, ಅಸೂಯೆ ಪಡಬೇಡ, ಒಳಿತು ಬಯಸಿ ಮುಂದುವರೆ ಒಳಿತಾಗುತ್ತದೆ. ಹೀಗೆ ನನ್ನ ತರಗತಿಯಲ್ಲಿ ಡೆಸ್ಕ್ ಬೆಂಚುಗಳು ಮಾತನಾಡಿದವು...ನನ್ನೊಳಗೆ ಮಾತ್ರ ಯಾಕೆ ನಿಮಗೂ ಇರಲಿ ಹಾಗಾಗಿ ದಾಟಿಸಿದೆ...
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!