ಎಲ್ಲಿಗೆ ಓಡಿ ಹೋಗ್ತಾ ಇದ್ದೀಯಾ? ಯಾಕೆ ಯೋಚನೆ ಮಾಡ್ತಾ ಇದ್ದೀಯಾ ಒಂದು ಸಲ ಮೊಬೈಲ್ ಹಿಡಿದು ಇನ್ಸ್ಟಾಗ್ರಾಮ್ ಅಲ್ಲಿ ಕೆಳಗೆ ಹೋಗು. ನಿನ್ನ ಜೀವನವನ್ನು ಬದಲಿಸುವ ಅದ್ಭುತ ಮೋಟಿವೇಶನ್ ಗಳು ಸಾವಿರ ಸಿಗುತ್ತವೆ, ನಿನ್ನ ಜೀವನ ಬದಲಾಗುತ್ತೆ ಎಲ್ಲವನ್ನ ಕೇಳು, ಇಲ್ಲ ಸರ್, ಹಾಗಾಗುವುದಿಲ್ಲ ಯಾಕೆಂದರೆ ಇತ್ತೀಚಿಗೆ ನಾನು ತುಂಬಾ ಬೇಸರದಲ್ಲಿ ಕುಳಿತಾಗ ಎಲ್ಲ ಮೋಟಿವೇಶನ್ ಗಳನ್ನು ಕೇಳಿ ಕೇಳಿ, ಕೇಳೋದನ್ನು ಮಾತ್ರ ರೂಡಿಸಿಕೊಂಡೆ. ಪ್ರತಿಯೊಬ್ಬರು ಅದನ್ನೇ ಹೇಳೋದು ಹಾಗೆ ಹೇಳುವವರು ಯಾರು ಅಷ್ಟು ದೊಡ್ಡ ಸಾಧನೆಯನ್ನು ಮಾಡಿಲ್ಲ ಹೇಳದೆ ಉಳಿದವರು ಮಾಡಿದ ಸಾಧನೆಗಳು ಸಾವಿರ ಇದ್ದಾವೆ. ನಾನು ಯಾವುದನ್ನು ಆರಿಸಿಕೊಳ್ಳಲಿ. ನೋಡು ಆಯ್ಕೆ ನಿನ್ನದು ಕೆಲವರು ಹೇಳುತ್ತಾರೆ ಮಾಡುವುದಿಲ್ಲ ಕೆಲವರು ಹೇಳಿ ಮಾಡ್ತಾರೆ ಕೆಲವರು ಹೇಳದೆ ಮಾಡುತ್ತಾರೆ ನೀನು ಮಾಡುವವನಾಗು ಹೇಳಿಯೋ ಹೇಳದೇಯೋ ತೊಂದರೆ ಇಲ್ಲ ಹೀಗಂದ ವಿಜ್ಞಾನ ಮಾಸ್ಟ್ರು ತರಗತಿಯ ಪಾಠಕ್ಕಿಂತ ಅದ್ಭುತವಾಗಿ ಜೀವನದ ಪಾಠವನ್ನು ಹೇಳಿಕೊಟ್ಟು ಹೋಗಿಬಿಟ್ರು.
- ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!