ಸಂಭ್ರಮದ ಯಾತ್ರೆಯನ್ನ ನೋಡುವುದಕ್ಕೆ ನಿಂತವರೆಲ್ಲರೂ ಕಣ್ಣುಗಳನ್ನು ಬೆಳಗಿಸಿಕೊಂಡಿದ್ದಾರೆ, ಮನಸ್ಸುಗಳನ್ನು ಸಂಭ್ರಮಿಸಿದ್ದಾರೆ. ಚಪ್ಪಾಳೆ ಕರತಾಡನ ಅದ್ಭುತ ಸನ್ನಿವೇಶಗಳು ಸರತಿಯಲ್ಲಿ ಸಾಗಿ ಹೋದವು. ಅದ್ಭುತ ದೃಶ್ಯಗಳಿಗೆ ಮನಸೂರೆಗೊಂಡವರು ಅವರವರ ಮನೆಗೆ ತೆರಳಿಬಿಟ್ಟರು. ಜನರನ್ನ ಸಂಭ್ರಮಿಸಿದ ಯಾತ್ರೆಯಲ್ಲಿ ಸಾಗಿದವರು ಕಾಲೀ ರಸ್ತೆಯಲ್ಲಿ ಮತ್ತದೇ ದೇಹವನ್ನು ಭಾರವಾದ ಪೇಠಗಳನ್ನ ದೊಡ್ಡ ದೊಡ್ಡ ಮೂರ್ತಿಗಳನ್ನು ಹೊತ್ತು ಬರುತ್ತಿದ್ದರು. ಮೆರವಣಿಗೆಯಲ್ಲಿದ್ದ ಸಂಭ್ರಮ ನಗು ವಾಪಸು ಬರುವಾಗ ಕಾಂತಿ ಕಳೆದುಕೊಂಡಿತ್ತು. ದೇಹ ವಿಶ್ರಾಂತಿ ಬಯಸುತ್ತಿದೆ, ಮೆರವಣಿಗೆಯಲ್ಲಿ ಹೊರಟಾಗ ನೋಡೋಕೆ ಸಾವಿರ ಜನ ಮತ್ತೆ ಕಷ್ಟದಲ್ಲಿ ಮನೆಗೆ ತೆರಳುವಾಗ ಖಾಲಿಯಾದ ರಸ್ತೆಗಳ ಜೊತೆಗಾರರು. ಬದುಕಿನ ಪರಿಸ್ಥಿತಿ ಬದುಕಿಗಾಗಿ ಈ ಪರಿಸ್ಥಿತಿ ಸಂಭ್ರಮಿಸುವುದಷ್ಟೇ ನಮ್ಮ ಕೆಲಸ. ನಮ್ಮ ಸಂಭ್ರಮವ ನೋಡಿ ಚಪ್ಪಾಳೆ ಹೊಡೆದವರು ಮತ್ತದೇ ದಾರಿಯಲ್ಲಿ ಸಾಗುವ ಸಿಗೊದಿಲ್ಲ ಅನ್ನೋದು ಅವರಿಗೆ ಅರ್ಥವಾಗಿತ್ತು. ಆದರೂ ಇನ್ನೊಂದು ಪಯಣಕ್ಕೆ ಮನಸ್ಥಿತಿಯನ್ನ ತಯಾರು ಮಾಡಿ ಹೊರಟುಬಿಟ್ಟಿದ್ದರು.

- ಧೀರಜ್ ಬೆಳ್ಳಾರೆ                                  

ಚಿತ್ರ ಕೃಪೆ: ಇಂಟರ್ನೆಟ್ ತಾಣ